ವಾಷಿಂಗ್ಟನ್ : ಇರಾನ್ ಮತ್ತು ಅಮೆರಿಕ ನಡುವಿನ ಪರಮಾಣು ಮಾತುಕತೆಗಳು ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಾತುಕತೆ ಕೈಬಿಟ್ಟರೆ ಹೊರ್ಮುಜ್ ಜಲಸಂಧಿ ಮುಕ್ತಗೊಳಿಸುವುದಾಗಿ ಇರಾನ್ ನೀಡಿದ ಪ್ರಸ್ತಾವನೆಗೆ ಅಮೆರಿಕದಿಂದ ನಿರಾಸಕ್ತ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಚರ್ಚೆಯ ಬಳಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ, ಈ ಪ್ರಸ್ತಾವ ಹಿಂದಿನಗಿಂತ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಇರಾನ್ ಮೇಲಿನ ದಿಗ್ಬಂಧನ ಸಡಿಲಿಸುವ ಯಾವುದೇ ನಿರ್ಧಾರವನ್ನು ಅಮೆರಿಕ ಕೈಗೊಂಡಿಲ್ಲ.
ಎರಡನೇ ಸುತ್ತಿನ ಮಾತುಕತೆ ಎರಡು ಬಾರಿ ವಿಫಲವಾದ ಹಿನ್ನೆಲೆಯಲ್ಲಿ, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಮಂಗಳವಾರವೂ ತೈಲದ ಬೆಲೆ ಏರಿಕೆ ಮುಂದುವರಿದಿದ್ದು, ಬ್ರೆಂಟ್ ಕಚ್ಚಾ ತೈಲ ಒಂದು ಬ್ಯಾರೆಲ್ಗೆ 111 ಡಾಲರ್ ಮಟ್ಟ ತಲುಪಿದೆ.
ಈ ಬೆಳವಣಿಗೆಗಳು ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.


