ಯಾದಗಿರಿ ; ಕಾರು ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 6 ಮಂದಿ ಸಜೀವ ದಹನವಾಗಿ ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಬಳಿ ನಡೆದಿದೆ.
ಸುರಪುರಿನ ವೇಣುಗೋಪಾಲ ದೇವಸ್ಥಾನ ಹಾಗೂ ತಿಂಥಣಿ ಮೌನೇಶ್ವರ ದೇಶ್ವರ ದರ್ಶನ ಪಡೆದು ಮರಳಿ ಹೋಗುವಾಗ ಘಟನೆ ಸಂಭವಿಸಿದೆ.ಸುರಪುರ ದಿಂದ ರಾಯಚೂರಿನ ಸಿರವಾರ ಪಟ್ಟಣಕ್ಕೆ ಹೋಗುವಾಗ ಯಾದಗಿರಿ ಜಿಲ್ಲೆಯ ಬೀದರ್- ಶ್ರೀರಂಗ ಪಟ್ಟಣ ರಾಜ್ಯ ಹೆದ್ದಾರಿಯ ಸುರಪುರ ತಾಲೂಕಿನ ಶಾಂತಪೂರ ಕ್ರಾಸ್ ಬಳಿ ನಡೆದ ಘಟನೆ ನಡೆದಿದೆ
ಇದೀಗ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಇಬ್ಬರು ಮಕ್ಕಳು ಸಹ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಒಟ್ಟು 10 ಜನ ಪ್ರಯಾಣಿಸುತ್ತಿದ್ದು ಓರ್ವ ಬಾಲಕ ಮಾತ್ರ ಪಾರಗಿದ್ದಾನೆ. ಮೃತ ಶಶಿಕಲಾ ಅವರ ಮಗ ವಿರಾಟ್ ಗೆ ಕಾಲು ಮುರಿತ ಪ್ರಾಣಾಪಾಯದಿಂದ ಪಾರಗಿದ್ದಾನೆ.
ಅಪಘಾತದಲ್ಲಿ ಒಂದೇ ಕುಟುಂಬದ 9 ಜನ ಸಾವನಪ್ಪಿದ್ದು ಚಿಕಿತ್ಸೆ ಫಲಕಾರಿಯಾಗದೆ ಕಲಬುರ್ಗಿಯಲ್ಲಿ ಬಾಲಕ ಅದ್ವೈತ ಸಾವನಪ್ಪಿದ್ದಾನೆ.
ಕಾರಿನಲ್ಲಿ 5 ಜನ ಮಕ್ಕಳು, 5 ಜನ ದೊಡ್ಡ ಪ್ರಯಾಣಿಸುತ್ತಿದ್ದರು.ಆ ಪೈಕಿ
ಕೃಷ್ಣಾ ನಾಯಕ , ಅನಂತಕಲಾ ,ಶರಣಪ್ಪ ,ನಿಸರ್ಗ,ಶ್ರೀನಿಧಿ ,ವೈಷ್ಣವ ಸಿದ್ದಾರ್ಥ, ಶಶಿಕಲಾ ,ಚಂದನ್ ,ಅದ್ವೈತ್ ಮೃತ ಪಟ್ಟಿದ್ದಾರೆ.ಕೃಷ್ಣಾನಾಯಕ್ ರವರು ಸಿರವಾರ ಪ.ಪಂ ಸದಸ್ಯ ರಾಗಿದ್ದರೆಂದು ತಿಳಿದುಬಂದಿದೆ.


