Saturday, July 18, 2026
Homeಕ್ರೀಡೆಮುಂಬೈ : ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ..!

ಮುಂಬೈ : ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ..!

ಮುಂಬೈ : ಭಾರತದ ದಿಗ್ಗಜ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಕೊಹ್ಲಿ ತಮ್ಮ 14 ವರ್ಷಗಳ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ಪೂರ್ಣ ವಿರಾಮ ನೀಡಿದ್ದಾರೆ. ಕ್ರಿಕೆಟ್ ಜೀವನದ ಉತ್ತುಂಗದಲ್ಲಿರುವಾಗಲೇ ಟೆಸ್ಟ್ ಪಂದ್ಯಗಳಿAದ ನಿವೃತ್ತರಾಗಿರುವುದು ಅಸಂಖ್ಯ ಅಭಿಮಾನಿಗಳಿಗೆ ಬೇಸರವುಂಟು ಮಾಡಿದೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮೇ ೭ ರಂದು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಈಗ ಕೊಹ್ಲಿ ಕೂಡ ಅದೇ ದಾರಿಯಲ್ಲಿ ಸಾಗಿದ್ದಾರೆ.

ಹದಿನಾಲ್ಕು ವರ್ಷ… `ನಾನು ಟೆಸ್ಟ್ ಕ್ಯಾಪ್ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪ ನನ್ನನ್ನು ಕರೆದೊಯ್ಯುವ ಪ್ರಯಾಣವನ್ನು ನಾನು ಎಂದಿಗೂ ಊಹಿಸಿರಲಿಲ್ಲ. ಅದು ನನ್ನನ್ನು ಪರೀಕ್ಷಿಸಿದೆ, ನನ್ನನ್ನು ರೂಪಿಸಿದೆ. ಜೊತೆಗೆ ಪಾಠಗಳನ್ನು ಕಲಿಸಿದೆ’ ಎಂದು ಸೋಮವಾರ ಇನ್‌ಸ್ಟಾದಲ್ಲಿ ಕಿಂಗ್ ಕೊಹ್ಲಿ ಬರೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಕುರಿತು ತೀರ್ಮಾನ ಕೈಕೊಳ್ಳುವುದು ಸುಲಭವಾಗಿರಲಿಲ್ಲ. ಸಾಕಷ್ಟು ಕ್ರಿಕೆಟ್ ಆಡಿರುವೆ. ಹೀಗಾಗಿ ಬಿಳಿ ಉಡುಪಿನ
ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸೂಕ್ತ ಸಮಯವೆಂದು ನಿರ್ಧರಿಸಿ ವಿದಾಯ ಹೇಳುವ ಕಠಿಣ ನಿರ್ಧಾರ ಕೈಕೊಂಡೆ ಎAದು ವಿರಾಟ್ ವಿವರಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular