Wednesday, September 16, 2026
Homeಜಿಲ್ಲೆಮಂಗಳೂರು : ಸೆ.19ರಂದು ಮೆಗಾ ಲೋಕ್ ಅದಾಲತ್ : ದ.ಕ. ಜಿಲ್ಲೆಯಲ್ಲಿ 8,515 ಪ್ರಕರಣಗಳಿಗೆ ರಾಜೀ...

ಮಂಗಳೂರು : ಸೆ.19ರಂದು ಮೆಗಾ ಲೋಕ್ ಅದಾಲತ್ : ದ.ಕ. ಜಿಲ್ಲೆಯಲ್ಲಿ 8,515 ಪ್ರಕರಣಗಳಿಗೆ ರಾಜೀ ಸಂಧಾನಕ್ಕೆ ಅವಕಾಶ..!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸೆಪ್ಟೆಂಬರ್ 19ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ 8,515 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಗುರುತಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾದೀಶ ಬಸವರಾಜ ರವರು ತಿಳಿಸಿದ್ದಾರೆ.

ಆಗಸ್ಟ್ 1, 2026ರ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 56,727 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 8,515 ಪ್ರಕರಣಗಳು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಕ್ಕೆ ಯೋಗ್ಯವೆಂದು ಗುರುತಿಸಲಾಗಿದ್ದು, 3,264 ಪ್ರಕರಣಗಳನ್ನು ಈಗಾಗಲೇ ಲೋಕ್ ಅದಾಲತ್‌ಗೆ ರವಾನಿಸಲಾಗಿದೆ. ಇದಲ್ಲದೆ, 232 ಪ್ರಕರಣಗಳು ಈಗಾಗಲೇ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, ವರದಿ ಸಲ್ಲಿಕೆಗೆ ಸಿದ್ಧವಾಗಿವೆ. ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಹಾಗೂ ತ್ವರಿತವಾಗಿ ನ್ಯಾಯ ಪಡೆಯಲು ಅವಕಾಶ ದೊರೆಯಲಿದೆ.

ನ್ಯಾಯಾಲಯಕ್ಕೆ ಪಾವತಿಸಿರುವ ಶುಲ್ಕವನ್ನು ನಿಯಮಾನುಸಾರ ಸಂಪೂರ್ಣವಾಗಿ ಮರುಪಾವತಿಸುವ ಅವಕಾಶವೂ ಇದೆ. ಸಾರ್ವಜನಿಕರು ತಮ್ಮ ಬಾಕಿ ಇರುವ ಹಾಗೂ ಕಾನೂನಿನ ಪ್ರಕಾರ ರಾಜೀ ಮಾಡಿಕೊಳ್ಳಬಹುದಾದ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮನವಿ ಮಾಡಿದೆ. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular