ಮಂಗಳೂರು : ಲಿಟಲ್ ಸ್ಟೆಪ್ಸ್ ಪ್ರೀ-ಸ್ಕೂಲ್ ಆ್ಯಂಡ್ ನರ್ಸರಿಯಲ್ಲಿ ಅ.1ರಂದು ನಡೆದ ರಕ್ಷಕ–ಶಿಕ್ಷಕ ಸಂಘದ ಸಭೆಯಲ್ಲಿ ಶಾಲೆಯ ಶೈಕ್ಷಣಿಕ ಗುಣಮಟ್ಟ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿ, ಪಠ್ಯೇತರ ಚಟುವಟಿಕೆಗಳು ಹಾಗೂ ಶಾಲೆಯ ಮುಂದಿನ ಅಭಿವೃದ್ಧಿ ಕುರಿತು ಸಮಗ್ರ ಚರ್ಚೆ ನಡೆಯಿತು.




ಸಭೆಯಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನೂತನ ರಕ್ಷಕ–ಶಿಕ್ಷಕ ಸಂಘವನ್ನು ರಚಿಸಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು : ಅಧ್ಯಕ್ಷೆ – ಸಂಧ್ಯಾ ಮೋಹನ್ ಕುಲಾಲ್.
ಉಪಾಧ್ಯಕ್ಷೆ – ದೀಪ ದೀಕ್ಷಿತ್
ಪ್ರಧಾನ ಕಾರ್ಯದರ್ಶಿ – ಭರತ್ ಜಿ.
ಕೋಶಾಧಿಕಾರಿ – ಅಶ್ವಿನಿ ಸುಶಾಂತ್
ಸಾಂಸ್ಕೃತಿಕ ಕಾರ್ಯದರ್ಶಿ – ನಿಶ್ಮಿತಾ ಶೆಟ್ಟಿ.
ಕ್ರೀಡಾ ಕಾರ್ಯದರ್ಶಿಗಳು – ಸಚಿನ್ ಧನಂಜಯ್ ಬಂಗೇರ ಹಾಗೂ ರವಿ.
ನವೆಂಬರ್ 1ರಂದು ವಾರ್ಷಿಕ ಕ್ರೀಡಾಕೂಟ : ಮಕ್ಕಳಲ್ಲಿ ಕ್ರೀಡಾ ಮನೋಭಾವ, ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡದ ಒಗ್ಗಟ್ಟನ್ನು ಬೆಳೆಸುವ ಉದ್ದೇಶದಿಂದ ನವೆಂಬರ್ 1ರಂದು ವಾರ್ಷಿಕ ಕ್ರೀಡಾಕೂಟ–2026 ಹಾಗೂ ಪೋಷಕರ ಕ್ರೀಡಾಕೂಟ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಡಿಸೆಂಬರ್ 12ರಂದು ವಾರ್ಷಿಕೋತ್ಸವ ಡಿಸೆಂಬರ್ 12ರಂದು ಶಾಲಾ ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ.
ಪೋಷಕರ ಪ್ರತಿಭೆಗೆ ವೇದಿಕೆ ಪೋಷಕರ ಪ್ರತಿಭೆ ಮತ್ತು ಸೃಜನಶೀಲತೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನವೆಂಬರ್ 15ರಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.ತಾಯಂದಿರಿಗಾಗಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಫ್ಯಾಷನ್ ಶೋ, ತಂದೆಯಂದಿರಿಗಾಗಿ Cooking Without Fire ಸ್ಪರ್ಧೆ ನಡೆಯಲಿದೆ. ಸಭೆಯಲ್ಲಿ ಶಾಲೆಯ ಮೂಲಸೌಕರ್ಯ, ಮಕ್ಕಳ ಸುರಕ್ಷತೆ, ಶಿಕ್ಷಣದ ಗುಣಮಟ್ಟ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಪೋಷಕರು ವಿವಿಧ ಸಲಹೆಗಳನ್ನು ನೀಡಿದರು.
ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ, ಸೃಜನಶೀಲತೆ, ಕಲೆ, ಕ್ರೀಡೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆ ಮತ್ತು ಪೋಷಕರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಲು ಒಮ್ಮತ ವ್ಯಕ್ತವಾಯಿತು.
ಪ್ರಾಥಮಿಕ ತರಗತಿ ಆರಂಭಿಸುವ ಬಗ್ಗೆಯೂ ಚರ್ಚೆ
ಪ್ರೀ-ಸ್ಕೂಲ್ ಶಿಕ್ಷಣದ ಮುಂದುವರಿದ ಭಾಗವಾಗಿ ಭವಿಷ್ಯದಲ್ಲಿ ಪ್ರಾಥಮಿಕ ತರಗತಿಗಳನ್ನು ಆರಂಭಿಸುವ ಸಾಧ್ಯತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕಾಗಿ ಅಗತ್ಯವಿರುವ ಮೂಲಸೌಕರ್ಯ, ಶಿಕ್ಷಕರ ನೇಮಕಾತಿ, ಪಠ್ಯಕ್ರಮ ಹಾಗೂ ಸಂಬಂಧಿತ ಅನುಮತಿಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು.
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಲೆ ಮತ್ತು ಪೋಷಕರು ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವನ್ನು ಸಭೆಯಲ್ಲಿ ಒತ್ತಿಹೇಳಲಾಯಿತು. ಸಭೆಯಲ್ಲಿ ಭಾಗವಹಿಸಿದ ಪೋಷಕರು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಧನ್ಯವಾದ ಸಲ್ಲಿಸುವುದರೊಂದಿಗೆ ಸಭೆ ಸಮಾಪ್ತಿಗೊಂಡಿತು.

