Friday, July 10, 2026
Homeಜಿಲ್ಲೆಮಂಗಳೂರು : ಮಜಿಲ ಸೂಟರ್‌ಪೇಟೆಯ ಶ್ರೀ ಕೋರಬ್ಬು ದೈವಸ್ಥಾನದ ಜೀರ್ಣೋದ್ಧಾರಕ್ಕೆ ಜು.12ರಂದು ಶಿಲಾನ್ಯಾಸ.

ಮಂಗಳೂರು : ಮಜಿಲ ಸೂಟರ್‌ಪೇಟೆಯ ಶ್ರೀ ಕೋರಬ್ಬು ದೈವಸ್ಥಾನದ ಜೀರ್ಣೋದ್ಧಾರಕ್ಕೆ ಜು.12ರಂದು ಶಿಲಾನ್ಯಾಸ.

ಮಂಗಳೂರು : ನಗರದ ಮಜಿಲ ಸೂಟರ್‌ಪೇಟೆಯಲ್ಲಿರುವ ಐತಿಹಾಸಿಕ ಶ್ರೀ ಕೋರಬ್ಬು ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಜುಲೈ 12, ಭಾನುವಾರ ಬೆಳಿಗ್ಗೆ 9 ಗಂಟೆಗೆ ಶಿಲಾನ್ಯಾಸ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರದ ರೋಹಿತ್ ಉಳ್ಳಾಲ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶತಮಾನಗಳ ಇತಿಹಾಸ ಹೊಂದಿರುವ ಈ ದೈವಸ್ಥಾನ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ದೈವದ ಅಪ್ಪಣೆಯಂತೆ ಊರ ಹತ್ತು ಸಮಸ್ತರು ಹಾಗೂ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಅರ್ಚಕ ಶ್ರೀ ಕೃಷ್ಣ ಅಡಿಗ ಅವರ ಪೌರೋಹಿತ್ಯದಲ್ಲಿ ಶಿಲಾನ್ಯಾಸ ವಿಧಿವಿಧಾನಗಳು ನೆರವೇರಲಿವೆ. ದೈವಸ್ಥಾನದ ಜೀರ್ಣೋದ್ಧಾರಕ್ಕೆ ಸುಮಾರು ₹1.36 ಕೋಟಿ ವೆಚ್ಚದ ಅಂದಾಜು ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿರುವ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಸೀತಾರಾಮ ಕೋಡಿಕಲ್, ಕಚೂರಮಾಲ್ಲಿ ದೇವಸ್ಥಾನದ ಅಧ್ಯಕ್ಷ ಶಿವಪ್ಪ ನಂತೂರು, ಜನಾರ್ಧನ ಸಾಲ್ಯಾನ್, ವಕೀಲರಾದ ಮೋಹನ್‌ದಾಸ್ ರೈ, ಶ್ರೀಧರ್ ಸುವರ್ಣ, ಭಾಸ್ಕರ್‌ಚಂದ್ರ ಶೆಟ್ಟಿ, ಸೀತಾರಾಮ ಸಾಲ್ಯಾನ್, ಎಸ್‌ಬಿಐನ ಶರ್ಮ ಪ್ರೇಮ ಕೋಟ್ಯಾನ್, ಮಾಜಿ ಕಾರ್ಪೊರೇಟರ್ ಭರತ್ ಕುಮಾರ್, ಕುಮಾರಿ ಅಪ್ಪಿ, ಎಸ್‌ಬಿಐ ಡೆಪ್ಯುಟಿ ಮ್ಯಾನೇಜರ್ ಹಾಗೂ ಗೌರವ ಸಲಹೆಗಾರ ರೋಹಿತ್ ಉಳ್ಳಾಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ರಮೇಶ್ ಕೋಟ್ಯಾನ್, ವಿಶ್ವನಾಥ್ ಉಳ್ಳಾಲ, ವೆಂಕಪ್ಪ ಪಾತ್ರಿ,ಸಾಕಿತ್ ರಾಜ್ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular