Friday, July 31, 2026
Homeಜಿಲ್ಲೆಮಂಗಳೂರು : ಕ್ರಿಕೆಟ್ ಆಡುತ್ತಿದ್ದ ವೇಳೆವಿದ್ಯುತ್ ತಂತಿ ಸ್ಪರ್ಶಸಿ ಬಾಲಕ ಸಾವು,ಮಂಗಳೂರಿನ ಮಹಾಕಾಳಿಪಡ್ಪು ಬಳಿ ಘಟನೆ.

ಮಂಗಳೂರು : ಕ್ರಿಕೆಟ್ ಆಡುತ್ತಿದ್ದ ವೇಳೆವಿದ್ಯುತ್ ತಂತಿ ಸ್ಪರ್ಶಸಿ ಬಾಲಕ ಸಾವು,ಮಂಗಳೂರಿನ ಮಹಾಕಾಳಿಪಡ್ಪು ಬಳಿ ಘಟನೆ.

ಮಂಗಳೂರು ; ಕ್ರಿಕೆಟ್ ಆಡುತ್ತಿದ್ದ ವೇಳೆ ಚೆಂಡು ತರಲು ಮೇಲಕ್ಕೆ ಹತ್ತಿದಾಗ ವಿದ್ಯುತ್ ತಂತಿ ಸ್ಪರ್ಶಸಿ ಬಾಲಕ ಸಾವನ್ನಪ್ಪಿದ ದಾರುಣ ಘಟನೆ ಮಂಗಳೂರಿನ ಮಹಾಕಾಳಿಪಡ್ಪು ಬಳಿ ನಡೆದಿದೆ.

ವಿದ್ಯುತ್ ತಂತಿ ಸ್ಪರ್ಶಸಿ ಮೃತಪಟ್ಟ ಬಾಲಕನನ್ನು ವರುಣ್ (15) ಎಂದು ಗುರುತಿಸಲಾಗಿದೆ.

ಎಸೆಸ್ಸೆಲ್‌ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಬಾಲಕ ಇಂದು ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದರು. ಆಟದ ಸಂದರ್ಭ ಹತ್ತಿರದ ಭಜನಾ ಮಂಡಳಿ ಕಟ್ಟಡದ ಮೇಲೆ ಚೆಂಡು ಬಿದ್ದಿದ್ದು ಚೆಂಡು ತರಲು ಮೇಲಕ್ಕೆ ಹತ್ತಿದಾಗ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ.

ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ರಜೆಯ ಸಂಭ್ರಮದಲ್ಲಿದ್ದ ಮಗನ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular