ಮಂಗಳೂರು : ಕರ್ನಾಟಕ ಸರ್ಕಾರದ 50% ದಂಡ ರಿಯಾಯಿತಿ ಯೋಜನೆಗೆ ಮಂಗಳೂರು ನಗರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜೂನ್ 21ರಿಂದ ಜುಲೈ 10, 2026ರವರೆಗೆ ನಡೆದ ವಿಶೇಷ ಅಭಿಯಾನದಲ್ಲಿ 35,160 ಬಾಕಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇತ್ಯರ್ಥಗೊಂಡಿದ್ದು, ₹92.43 ಲಕ್ಷ ದಂಡವನ್ನು ವಾಹನ ಸವಾರರು ಪಾವತಿಸಿದ್ದಾರೆ.
ಪಾವತಿಯಾದ ಪ್ರಕರಣಗಳಲ್ಲಿ 18,792 ಪ್ರಕರಣಗಳು ಎಐ ಕ್ಯಾಮೆರಾಗಳಲ್ಲಿ ದಾಖಲಾಗಿದ್ದರೆ, 16,368 ಪ್ರಕರಣಗಳು ಕರ್ತವ್ಯದಲ್ಲಿದ್ದ ಸಂಚಾರ ಸಿಬ್ಬಂದಿ ದಾಖಲಿಸಿದವುಗಳಾಗಿವೆ.
ಇದೇ ವೇಳೆ ರಸ್ತೆ ಸುರಕ್ಷತೆಗೆ ಒತ್ತು ನೀಡಿರುವ ಮಂಗಳೂರು ನಗರ ಪೊಲೀಸ್, 2026ರಲ್ಲಿ ಘೋರ ಅಪಘಾತ ಹಾಗೂ ಗಂಭೀರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 224 ವಾಹನ ಚಾಲಕರ ಚಾಲನಾ ಪರವಾನಗಿಗಳನ್ನು (ಡಿಎಲ್) ಅಮಾನತುಗೊಳಿಸಲು ಆರ್‌ಟಿಒಗೆ ಶಿಫಾರಸು ಮಾಡಿದೆ. ಇದುವರೆಗೆ 137 ಚಾಲನಾ ಪರವಾನಗಿಗಳು ಅಮಾನತ್ತಾಗಿದ್ದು, ಉಳಿದ ಪ್ರಕರಣಗಳು ಪ್ರಕ್ರಿಯೆಯಲ್ಲಿವೆ.
ಮುಖ್ಯಾಂಶಗಳು:
50% ದಂಡ ರಿಯಾಯಿತಿಯಿಂದ 35,160 ಪ್ರಕರಣಗಳ ಇತ್ಯರ್ಥ
₹92.43 ಲಕ್ಷ ದಂಡ ಸಂಗ್ರಹ
ಎಐ ಕ್ಯಾಮೆರಾ ಪ್ರಕರಣಗಳು – 18,792
ಸಿಬ್ಬಂದಿ ದಾಖಲಿಸಿದ ಪ್ರಕರಣಗಳು – 16,368
224 ಚಾಲಕರ ಡಿಎಲ್ ಅಮಾನತ್ತಿಗೆ ಶಿಫಾರಸು
137 ಡಿಎಲ್ ಈಗಾಗಲೇ ಅಮಾನತು, ಉಳಿದವು ಪ್ರಕ್ರಿಯೆಯಲ್ಲಿವೆ.


