Thursday, July 23, 2026
Homeಸಿನಿಮಾಬೆಂಗಳೂರು : ಕಿರುತೆರೆಯ ಖ್ಯಾತ ನಿರ್ದೇಶಕ, ಸಿನಿಮಾ ನಿರ್ಮಾಪಕ ವಿನೋದ್ ದೋಂಡಳೆ ನಿಧನ..!

ಬೆಂಗಳೂರು : ಕಿರುತೆರೆಯ ಖ್ಯಾತ ನಿರ್ದೇಶಕ, ಸಿನಿಮಾ ನಿರ್ಮಾಪಕ ವಿನೋದ್ ದೋಂಡಳೆ ನಿಧನ..!

ಬೆಂಗಳೂರು : ಸ್ಯಾಂಡಲ್ವುಡ್ ಗೆ ಮತ್ತೊಂದು ಆಘಾತಉಂಟಾಗಿದೆ. ಸಿನಿಮಾ ಹಾಗೂ ಕರಿಮಣಿ ಸೀರಿಯಲ್‌ ಧಾರಾವಾಹಿ ನಿರ್ದೇಶಕ ವಿನೋದ್ ದೊಂಡಾಲೆ ನಿಧನ ಹೊಂದಿದ್ದಾರೆ. ಅವರ ಶವ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿನೋದ್ ದೊಂಡಾಲೆ ಅವರು ಹಣಕಾಸಿನ ವಿಚಾರಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ವಿನೋದ್ ದೊಂಡಾಲೆಗೆ ಮೂವರು ಮಕ್ಕಳು ಹಾಗೂ ಪತ್ನಿ ಇದ್ದರು. ವಿನೋದ್ ನಿಧನಕ್ಕೆ ಚಿತ್ರರಂಗದ ಕೆಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡದ ಹಲವು ಸೀರಿಯಲ್‌ ನಿರ್ದೇಶನದ ಜೊತೆಗೆ ವಿನೋದ್ ಅವರು ನಟ ನೀನಾಸಂ ಸತೀಶ್ ಅಭಿನಯದ ಅಶೋಕ ಬ್ಲೇಡ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ನಿರ್ದೇಶಕ ವಿನೋದ್ ದೋಂಡಳೆ ಅವರು ಸಿನಿಮಾ ಪ್ರೊಡಕ್ಷನ್‌ಗಾಗಿ ಸುಮಾರು ಎರಡು ಕೋಟಿಗೂ ಅಧಿಕ ಮೊತ್ತದ ಹಣ ಸಾಲ ಮಾಡಿಕೊಂಡಿದ್ದರಂತೆ. ಸಾಲಭಾದೆಗೆ ವಿನೋದ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular