Sunday, August 16, 2026
Homeರಾಜ್ಯಬಾಗಲಕೋಟೆ : ಪರಿಹಾರ ಹಣ ವಿಳಂಬಕ್ಕೆ ಆಕ್ರೋಶ ; ಬಿಟಿಡಿಎ ಸಿಬ್ಬಂದಿಗೆ ರೈತನಿಂದ ಚಪ್ಪಲಿ ಏಟು.

ಬಾಗಲಕೋಟೆ : ಪರಿಹಾರ ಹಣ ವಿಳಂಬಕ್ಕೆ ಆಕ್ರೋಶ ; ಬಿಟಿಡಿಎ ಸಿಬ್ಬಂದಿಗೆ ರೈತನಿಂದ ಚಪ್ಪಲಿ ಏಟು.

ಬಾಗಲಕೋಟೆ : ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ಕಚೇರಿಯಲ್ಲಿ ನಡೆದ ಹಕ್ಕುಪತ್ರ ವಿತರಣಾ ಸಭೆಯ ವೇಳೆ ರೈತನೊಬ್ಬ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ.

ರೈತ ಬಸವರಾಜ ದೊಡ್ಡಮನಿ ಅವರ ಜಮೀನನ್ನು ಬಾಗಲಕೋಟೆ ನಗರಕ್ಕೆ ಸಂಪರ್ಕ ಕಲ್ಪಿಸುವ ದಡ್ಡೇನವರ ವೃತ್ತದ ಸಮೀಪ ರಸ್ತೆ ನಿರ್ಮಾಣಕ್ಕಾಗಿ 2004ರಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಹಲವು ವರ್ಷಗಳಾದರೂ ಸಮರ್ಪಕ ಪರಿಹಾರ ಧನ ನೀಡದ ಹಿನ್ನೆಲೆಯಲ್ಲಿ ರೈತ ಆಕ್ರೋಶಗೊಂಡಿದ್ದರು ಎನ್ನಲಾಗಿದೆ.

ಸಭೆಯ ವೇಳೆ ಬಿಟಿಡಿಎ ಕೇಸ್ ವರ್ಕರ್ ಅಂಕದ ಅವರ ಮೇಲೆ ಬಸವರಾಜ ದೊಡ್ಡಮನಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ಕೆಲಕಾಲ ಕಚೇರಿ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.bಇದೇ ವೇಳೆ ಡಿಎಸ್‌ಎಸ್ ಕಾರ್ಯಕರ್ತರು ಕೂಡ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular