ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೌಗೋಳಿಕ ರಾಜಕೀಯ ಅನಿಶ್ಚಿತತೆ ಹಾಗೂ ರಕ್ಷಣಾವಾದ ವಿಜೃಂಭಿಸಿರುವ ಸಮಯದಲ್ಲಿ ಭಾರತ-ಐರೋಪ್ಯ ಒಕ್ಕೂಟ ನಡುವಣ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದವು ಸ್ಥಿರತೆ ಮತ್ತು ಮಾರುಕಟ್ಟೆ ಪ್ರವೇಶವನ್ನು ಬಯಸುವ ಪ್ರಮುಖ ಆರ್ಥಿಕತೆಗಳಿಗೆ ಭಾರತ ಈಗ ವಿಶ್ವಾಸಾರ್ಹ, ಪ್ರಾಯೋಗಿಕ ಮತ್ತು ಹೆಚ್ಚು ಅನಿವಾರ್ಯ ಪಾಲುದಾರನಾಗಿ ಬಿಂಬಿಸುವAತೆ ಮಾಡಿದೆ.
ಸದ್ಯ ಭಾರತ ಈ ಒಪ್ಪಂದ ಮುಖೇನ ಜಾಗತಿಕ ಮಟ್ಟದಲ್ಲಿ ಹೆಚ್ಚು ಮುನ್ನಲೆಗೆ ಬರುತ್ತಿದ್ದಂತೆಯೇ ಅಮೆರಿಕಕ್ಕೆ ನಡುಕ ಹುಟ್ಟಿಸಿದೆ. ವರ್ಷದ ಹಿಂದೆ ಜಗತ್ತಿನ ಬಹುತೇಕ ದೇಶಗಳ ಮೇಲೆ ಮನಬಂದAತೆ ಸುಂಕ ವಿಧಿಸುತ್ತಿದ್ದ ಅಧ್ಯಕ್ಷ ಟ್ರಂಪ್ ನೇತೃತ್ವದ ಅಮೆರಿಕ ಈಗ ಜಗತ್ತಿನಲ್ಲಿ ಒಂಟಿಯಾದAತೆ ಕಂಡುಬರುತ್ತಿದೆ. ರಷ್ಯಾ ತೈಲ ಖರೀದಿಸುತ್ತಿದ್ದ ಭಾರತಕ್ಕೆ ಶೇ.25 ಹೆಚ್ಚುವರಿ ಸುಂಕ ವಿಧಿಸಿದ್ದೇವೆ ಎಂದು ಬೀಗುತ್ತಿದ್ದ ಟ್ರಂಪ್ ತಂಡ ಈಗ ಭಾರತ-ಇಯು ಒಪ್ಪಂದಕ್ಕೆ ಅನಗತ್ಯವಾಗಿ ಅಪಸ್ವರ ಎತ್ತಿದೆ.
ಭಾರತ-ಯುರೋಪ್ ಒಕ್ಕೂಟ ಒಪ್ಪಂದವನ್ನು “ಎಲ್ಲಾ ಒಪ್ಪಂದಗಳ ತಾಯಿ” ಎಂದು ವಿವರಿಸುವುದು ಕೇವಲ ವಾಕ್ಚಾತುರ್ಯವಲ್ಲ. 141 ಕೋಟಿ ಭಾರತೀಯರು ಹಾಗೂ ನೂರಾರು ಮಿಲಿಯನ್ ಯುರೋಪಿಯನ್ನರ ಸಂಯೋಜಿತ ಮಾರುಕಟ್ಟೆಯಿಂದಾಗಿ ಈ ಒಪ್ಪಂದವು ಉತ್ಪಾದನೆ, ಸೇವೆಗಳು, ಡಿಜಿಟಲ್ ವ್ಯಾಪಾರ, ಹಸಿರು ತಂತ್ರಜ್ಞಾನಗಳು ಮತ್ತು ಪೂರೈಕೆ ಸರಪಳಿ ಏಕೀಕರಣದಾದ್ಯಂತ ಆಳವಾದ ಅವಕಾಶಗಳನ್ನು ನೀಡುತ್ತದೆ. ಟ್ರಂಪ್ ನೇತೃತ್ವದಲ್ಲಿ ಅಮೆರಿಕ ಸುಂಕಗಳ ಹಠಾತ್ ಹೆಚ್ಚಳ, ವ್ಯಾಪಾರದ
ರಾಜಕೀಕರಣ, ಆರ್ಥಿಕ ಸಂಬAಧಗಳನ್ನು ಶಸ್ತçಸಜ್ಜಿತಗೊಳಿಸುವ ಉದ್ದೇಶದಿಂದ ಅಮೆರಿಕದ ವ್ಯಾಪಾರ ನೀತಿಯಲ್ಲಿನ ಚಂಚಲತೆ ವಿರುದ್ಧ ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವಣ ಒಪ್ಪಂದ ಮೇಲುಗೈ ಸಾಧಿಸುವಂತೆ ಮಾಡಿದೆ.
ಈ ಒಪ್ಪಂದದ ಮುಖ್ಯಾಂಶಗಳೇನೆಂದರೆ ಭಾರತ-ಐರೋಪ್ಯ ಒಕ್ಕೂಟ ಮಧ್ಯೆ ವಿಶ್ವ ವ್ಯಾಪಾರದ ೩ನೇ ೧ನೇ ಭಾಗ ವ್ಯವಹಾರ ವಾಗಲಿದೆ.ಶೇ.99ಕ್ಕಿಂತಲೂ ಹೆಚ್ಚು ವಸ್ತುಗಳು ಉಭಯತ್ರಯರ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಮಹಿಳೆಯರು, ಕುಶಲಕರ್ಮಿಗಳು, ಯುವಕರು, ವೃತ್ತಿಪರರಿಗೆ ಉದ್ಯೋಗಾವಕಾಶವಾಗಲಿದೆ.ಜವಳಿ, ಚರ್ಮ, ಸಾಗರೋತ್ಪನ್ನ, ಆಭರಣ ವಲಯಗಳಿಗೆ ಆದ್ಯತೆಯಡಿ ರಫ್ತು ಪ್ರವೇಶಕ್ಕೆ ಅವಕಾಶವಾಗಲಿದೆ. 33 ಶತಕೋಟಿ ಡಾ. ರಫ್ತಿನ ಮೇಲಿನ ಸುಂಕ ಶೇ.10 ರಷ್ಟಕ್ಕೆ ಕಡಿತಗೊಳಿಸಿ ಶೂನ್ಯಕ್ಕಿಳಿದಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಕೋಟಾ ಆಧಾರಿತ ಉದಾರೀಕರಣ ಪ್ಯಾಕೇಜ್ ಬರಲಿದೆ.ಐರೋಪ್ಯ ಒಕ್ಕೂಟದ ವಾಹನ ತಯಾರಕರಿಗೆ ಭಾರತದಲ್ಲಿ ಹೆಚ್ಚಿನ ಬೆಲೆಯವಾಹನ ಪರಿಚಯಿಸಲು ಅವಕಾಶವಿದೆ.


