Saturday, July 18, 2026
Homeಜಿಲ್ಲೆಮಂಗಳೂರು : ಭೂ ವಿವಾದ : ಕಾರು ಗುದ್ದಿಸಿ ಪಾಲುದಾರನ ಕೊಲೆ ಯತ್ನ ,ಆರೋಪಿಯ ಬಂಧನ.

ಮಂಗಳೂರು : ಭೂ ವಿವಾದ : ಕಾರು ಗುದ್ದಿಸಿ ಪಾಲುದಾರನ ಕೊಲೆ ಯತ್ನ ,ಆರೋಪಿಯ ಬಂಧನ.

ಮಂಗಳೂರು : ಭೂ ವಿವಾದಕ್ಕೆ ಸಂಬಂಧಿಸಿದಂತೆ ಪಾಲುದಾರನನ್ನ ಕಾರು ಗುದ್ದಿಸಿ ಕೊಲೆಗೆ ಯತ್ನಿಸಿದ್ದ ಘಟನೆ ನಿನ್ನೆ 11 ಗಂಟೆ ಸುಮಾರಿಗೆ ಮಂಗಳೂರು ನಗರದ ಆರ್ಯ ಸಮಾಜ ರಸ್ತೆಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಶರೀಫ್ ಎಂದು ತಿಳಿಯಲಾಗಿದೆ.ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಕೃತ್ಯ ನಡೆಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮಲ್ಲಿಕಟ್ಟೆ ನಿವಾಸಿ ಮೋಹನ್ ದಾಸ್ ಶೆಟ್ಟಿ (56) ಈ ಬಗ್ಗೆ ದೂರು ನೀಡಿದ್ದು ಆರೋಪಿ ಶರೀಫ್ ಮತ್ತು ತಂದೆ ಮೊಹಮ್ಮದ್ ಇಕ್ಬಾಲ್ ಅವರೊಂದಿಗೆ ನಿರಂತರ ಭೂ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.ಆರೋಪಿಯು ಸುರತ್ಕಲ್ ಮತ್ತು ವಾಮಂಜೂರು ಪ್ರದೇಶಗಳಲ್ಲಿರುವ ಆಸ್ತಿಗಳಲ್ಲಿ ಸುಮಾರು 2 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿದ್ದು ತಾನು ಮೋಸ ಹೋಗಿದ್ದೇನೆ ಎಂಬ ಅನುಮಾನ ಹೊಂದಿದ್ದ ಕಾರಣ ಈ ಕೃತ್ಯ ನಡೆಸಿದ್ದಾನೆ.ನಿನ್ನೆ ಮದ್ಯಾಹ್ನ ಎರಡೂ ಕಡೆಯವರು ಚರ್ಚೆಗಾಗಿ ಭೇಟಿಯಾಗಿದ್ದ ಸಂದರ್ಭದಲ್ಲಿ ವ್ಯಾಜ್ಯ ನಡೆದಿದ್ದು ಆರೋಪಿಯು ದೂರುದಾರರ ಮೊಬೈಲ್ ಫೋನ್ ಕಸಿದುಕೊಂಡಿದ್ದನು ಬಳಿಕ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಂಡಿದ್ದು .ಮೋಹನ್ ದಾಸ್ ಶೆಟ್ಟಿಯವರು ತನ್ನ ಬೈಕ್ ನಲ್ಲಿ ಸಂಚರಿಸುವ ಸಂದರ್ಭದಲ್ಲಿ ತನ್ನ ಇನ್ನೋವಾ ಕಾರಿನಿಂದ ಬಂದು ಗುದ್ದಿಸಿ ಕೊಲೆಗೆ ಯತ್ನ ನಡೆಸಿದ ವಿಡಿಯೋ ಸಿ .ಸಿ ಟಿವಿ ಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular