Saturday, July 18, 2026
Homeವಿದೇಶಟೆಹ್ರಾನ್ : ಇರಾನ್‌ಗೆ ಖಮೇನಿ ಪುತ್ರ ಹೊಸಸುಪ್ರೀಂ ನಾಯಕ, ಟ್ರಂಪ್ ಅತೃಪ್ತಿ, ಪುಟಿನ್ ಸ್ವಾಗತ.

ಟೆಹ್ರಾನ್ : ಇರಾನ್‌ಗೆ ಖಮೇನಿ ಪುತ್ರ ಹೊಸಸುಪ್ರೀಂ ನಾಯಕ, ಟ್ರಂಪ್ ಅತೃಪ್ತಿ, ಪುಟಿನ್ ಸ್ವಾಗತ.

ಟೆಹ್ರಾನ್ : ಇರಾನ್‌ನ ನೂತನ ಪರ ಮೋಚ್ಚ ನಾಯಕನನ್ನಾಗಿ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಆಯ್ಕೆಯಾಗಿದ್ದಾರೆ. ಆಯತೊಲ್ಲಾ ಅಲಿ ಖಮೇನಿ ಹತರಾದ 9 ದಿನ ಬಳಿಕ ತಜ್ಞರ ಸಮಿತಿ ಹೊಸ ಸವೋಚ್ಚ ನಾಯಕನನ್ನು ಆಯ್ಕೆ ಮಾಡಿದೆ. ಖಮೇನಿ ಅವರ ಎರಡನೇ ಪುತ್ರ 56 ವರ್ಷದ ಮೊಜ್ತಬಾ ಖಮೇನಿ ಇರಾನ್ ಸುಪ್ರೀಂ ಲೀಡರ್ ಎಂದು ಘೋಷಿಸಲಾಗಿದೆ.

ಇರಾನ್ ಸುಪ್ರೀಂ ಲೀಡರ್ ಆಯ್ಕೆಗೆ ಕಸರತ್ತು ನಡೆಸಿದೆ ಎಂದು ವರದಿಯಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್‌ನ ನೂತನ ನಾಯಕನ ನೇಮಕಾತಿಯಲ್ಲಿ ತನ್ನ ಪಾತ್ರ ಇರಬೇಕು. ತಮ್ಮಿಂದ ಅನುಮತಿ ಪಡೆಯದಿದ್ದರೆ ಖಮೇನಿ ಉತ್ತರಾಧಿಕಾರಿ ಯಾರೇ ಆದರೂ ಅವರು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನೂತನ ನಾಯಕ ಘೋಷಣೆ ಮಾಡುವ ಕೆಲವೇ ಹೊತ್ತು ಮುಂಚೆ ಟ್ರಂಪ್ ಬೆದರಿಕೆ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಇರಾನ್ ಅಧಿಕಾರಿಗಳು, ನೂತನ ನಾಯಕನ ಆಯ್ಕೆ ನಿರ್ಧಾರ ನಮ್ಮದೇ ಆಗಿರುತ್ತದೆ. ನಮ್ಮ ದೇಶದ ವ್ಯವಹಾರಗಳಲ್ಲಿ ಯಾರೂ ಹಸ್ತಕ್ಷೇಪ ಮಾಡುವ ಅವಕಾಶ ಮಾಡಿಕೊಡಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಯುದ್ಧ ಆರಂಭಿಸಿದ್ದಕ್ಕೆ ಟ್ರಂಪ್ ಇರಾನಿಯನ್ನರ ಕ್ಷಮೆ ಕೇಳಬೇಕು ಎಂದು ವಿದೇಶಾಂಗ ಸಚಿವ ಆರಘ್ಚಿ ಆಗ್ರಹಿಸಿದರು. ಇನ್ನು ಇಸ್ರೇಲ್ ಸಹ ಈ ಹಿಂದೆ ಇರಾನ್ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ಮುಗಿಸುತ್ತೇವೆ ಎಂದು ಎಚ್ಚರಿಸಿದ್ದರು.

ಸುಪ್ರೀಂ ಲೀಡರ್ ಆಯ್ಕೆ ಬೆನ್ನಲ್ಲೇ ದಾಳಿ: ಇರಾನ್‌ನ ನೂತನ ಸವೋಚ್ಚ ನಾಯಕನಾಗಿ ಖಮೇನಿ ಪುತ್ರ ಮೋಜ್ತಬಾ ಆಯ್ಕೆಯಾದ ಬೆನ್ನಲ್ಲೇ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿದೆ. ಅಲ್ಲದೇ ಕತಾರ್ ಮೇಲೆಯೂ ದಾಳಿ ನಡೆಸಲಾಗಿದ್ದು, ಭಾರೀ ಸ್ಫೋಟದ ಸದ್ದು ಕೇಳಿಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular