Saturday, August 8, 2026
Homeದೇಶನವದೆಹಲಿ : NEET ಪ್ರಶ್ನೆಪತ್ರಿಕೆ ಸೋರಿಕೆ: NTA ತಜ್ಞರೇ ಪ್ರಮುಖ ಆರೋಪಿಗಳು ; ಹಲವು ರಾಜ್ಯಗಳಲ್ಲಿ...

ನವದೆಹಲಿ : NEET ಪ್ರಶ್ನೆಪತ್ರಿಕೆ ಸೋರಿಕೆ: NTA ತಜ್ಞರೇ ಪ್ರಮುಖ ಆರೋಪಿಗಳು ; ಹಲವು ರಾಜ್ಯಗಳಲ್ಲಿ ಸಂಚು — ಸಿಬಿಐ.

ಹೊಸದಿಲ್ಲಿ : ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ತಜ್ಞರು, ಮಧ್ಯಸ್ಥಿಕೆದಾರರು ಹಾಗೂ ಕೋಚಿಂಗ್‌ ಕೇಂದ್ರಗಳ ನಿರ್ವಾಹಕರು ಭಾಗಿಯಾಗಿದ್ದರು ಎಂದು ಸಿಬಿಐ ಆರೋಪಿಸಿದೆ.

ಪ್ರಕರಣವು ಹಲವು ರಾಜ್ಯಗಳಲ್ಲಿ ನಡೆದ ಸಂಚಿನ ಭಾಗವಾಗಿತ್ತು ಎಂದು 13 ಆರೋಪಿಗಳ ವಿರುದ್ಧ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ. ರಾಜಸ್ಥಾನ ಮತ್ತು ಕೇರಳದಲ್ಲಿ ಪ್ರಶ್ನೆಪತ್ರಿಕೆ ಹಂಚಿಕೆಯಾಗಿತ್ತು ಎಂದು ಸಿಬಿಐ ಹೇಳಿದೆ. NTAಯ ತಜ್ಞರು ಪ್ರಶ್ನೆಪತ್ರಿಕೆ ತಯಾರಿಕೆ ಮತ್ತು ಭಾಷಾಂತರದ ವಿವಿಧ ಹಂತಗಳಲ್ಲಿ ಪ್ರಶ್ನೆಗಳನ್ನು ಕದ್ದು, ಅವುಗಳನ್ನು ನೆನಪಿನಲ್ಲಿಟ್ಟುಕೊಂಡು ಹೊರಗೆ ಬಂದು ಮರುಬರೆದು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೂವರು NTA ತಜ್ಞರ ಹೆಸರು NTAಯ ತಜ್ಞರಾದ ಮನೀಶಾ ಗುರುನಾಥ್ ಮಂದಾರೆ, ಪ್ರಹ್ಲಾದ್ ಕುಲಕರ್ಣಿ ಹಾಗೂ ಮನೀಶಾ ಸಂಜಯ್ ಹವಲಾಗ್ ಅವರ ಹೆಸರುಗಳನ್ನು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

‘ಫಿಫಾ ವಿಶ್ವಕಪ್’ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ತನಿಖೆಗೆ ಪ್ರಮುಖ ಸುಳಿವು ನೀಡಿದ್ದು ‘ಫಿಫಾ ವಿಶ್ವಕಪ್’ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್. ಎಂಟು ಸದಸ್ಯರಿದ್ದ ಈ ಗುಂಪನ್ನು ಆರೋಪಿ ಮನೀಶ್ ಮಂದಾರೆ ರಚಿಸಿದ್ದರು. ಜೀವಶಾಸ್ತ್ರದ ವಿಶೇಷ ತರಗತಿಗಳ ಪಾಠಗಳನ್ನು ಹಂಚಿಕೊಳ್ಳಲು ಬಳಸುತ್ತಿದ್ದ ಈ ಗುಂಪಿನ ಮೂಲಕ ಮಂದಾರೆ ಮತ್ತು ಕುಲಕರ್ಣಿ ಪ್ರಶ್ನೆಪತ್ರಿಕೆಯನ್ನು ಮಾರಾಟ ಮಾಡಿದ್ದರು ಎಂದು ಸಿಬಿಐ ಆರೋಪಿಸಿದೆ.

ಭಾಷಾಂತರದ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಶ್ನೆಪತ್ರಿಕೆ ತಯಾರಿಸುವ ಹಾಗೂ ಭಾಷಾಂತರಿಸುವ ಸಂದರ್ಭದಲ್ಲಿ ಸೋರಿಕೆ ನಡೆದಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ. 135 ಪ್ರಶ್ನೆಗಳಿದ್ದ ಪ್ರಶ್ನೆಪತ್ರಿಕೆಯ ಭಾಷಾಂತರದ ವೇಳೆ ಪ್ರಶ್ನೆಗಳನ್ನು ನೆನಪಿಟ್ಟುಕೊಂಡು ಹೊರಬಂದ ಕುಲಕರ್ಣಿ, ಹೋಟೆಲ್‌ನಲ್ಲಿ ಕುಳಿತು ಅವುಗಳನ್ನು ಬರೆದು ಹಂಚಿಕೊಂಡಿದ್ದರು ಎನ್ನಲಾಗಿದೆ.

ಪ್ರಶ್ನೆಪತ್ರಿಕೆ ತಯಾರಿ ಕೊಠಡಿಗೆ ಪ್ರವೇಶಿಸುವಾಗ ಅಥವಾ ಹೊರಬರುವಾಗ ಸಮರ್ಪಕ ತಪಾಸಣೆ ನಡೆಯುತ್ತಿರಲಿಲ್ಲ ಎಂಬುದನ್ನೂ ಸಿಬಿಐ ಉಲ್ಲೇಖಿಸಿದೆ. ₹10–25 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ವಿವಿಧ ರಾಜ್ಯಗಳಲ್ಲಿ ₹10ರಿಂದ ₹25 ಲಕ್ಷದವರೆಗೆ ಮಾರಾಟ ಮಾಡಲಾಗಿತ್ತು ಎಂದು ಸಿಬಿಐ ಆರೋಪಿಸಿದೆ.

ಸಿಕಾರ್‌ನ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಯೊಬ್ಬ ತಾನು ಪಡೆದ ಪ್ರಶ್ನೆಪತ್ರಿಕೆಯನ್ನು ಕೇರಳದಲ್ಲಿದ್ದ ಸ್ನೇಹಿತನಿಗೆ ₹30 ಸಾವಿರಕ್ಕೆ ಮಾರಾಟ ಮಾಡಿದ್ದ. ಬಳಿಕ ಆ ಪ್ರಶ್ನೆಪತ್ರಿಕೆಯನ್ನು ಸುಮಾರು ಆರು ವಿದ್ಯಾರ್ಥಿಗಳಿಗೆ ಹಂಚಲಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular