Saturday, June 27, 2026
Homeಜಿಲ್ಲೆಉಳ್ಳಾಲ : ನಾಟೆಕಲ್‌ನಲ್ಲಿ ಪಿ.ಎ. ಕಾಲೇಜು ಬಸ್ ಅಪಘಾತ,ಬಸ್‌ನಡಿಗೆ ಸಿಲುಕಿದ ಇನ್ಫೋಸಿಸ್ ಉದ್ಯೋಗಿ ಬೈಕ್ ಸವಾರ...

ಉಳ್ಳಾಲ : ನಾಟೆಕಲ್‌ನಲ್ಲಿ ಪಿ.ಎ. ಕಾಲೇಜು ಬಸ್ ಅಪಘಾತ,ಬಸ್‌ನಡಿಗೆ ಸಿಲುಕಿದ ಇನ್ಫೋಸಿಸ್ ಉದ್ಯೋಗಿ ಬೈಕ್ ಸವಾರ ಸಾವು.

ಉಳ್ಳಾಲ : ದೇರಳಕಟ್ಟೆ ಸಮೀಪದ ನಾಟೆಕಲ್ ತಿರುವಿನಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿದ ಪರಿಣಾಮ, ಬಸ್ಸಿನಡಿಗೆ ಸಿಲುಕಿದ್ದ ಸ್ಕೂಟರ್ ಸವಾರ ಇನ್ಫೋಸಿಸ್ ಉದ್ಯೋಗಿ ಪ್ರಜ್ವಲ್ ಅರ್ನಾಲ್ಡ್ (30) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪ್ರಜ್ವಲ್ ತಮ್ಮ ಸಹೋದ್ಯೋಗಿ ಅಕ್ಷತಾ ಅವರೊಂದಿಗೆ ಸ್ಕೂಟರ್‌ನಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಬಸ್ ಏಕಾಏಕಿ ನಿಯಂತ್ರಣ ತಪ್ಪಿ ಉರುಳಿದೆ. ಅಪಘಾತದಲ್ಲಿ ಸ್ಕೂಟರ್ ಸಂಪೂರ್ಣ ಬಸ್ಸಿನಡಿ ಸಿಲುಕಿಕೊಂಡು ನಜ್ಜುಗುಜ್ಜಾಗಿದೆ.

ಸ್ಥಳೀಯರು ತಕ್ಷಣ ಕ್ರೇನ್ ಸಹಾಯದಿಂದ ಬಸ್ಸನ್ನು ಮೇಲಕ್ಕೆತ್ತಿ ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಪ್ರಜ್ವಲ್ ಅವರಿಗೆ ಆಂತರಿಕ ಗಾಯಗಳು ಗಂಭೀರವಾಗಿದ್ದು ಚಿಕಿತ್ಸೆ ವೇಳೆ ಮೃತಪಟ್ಟರೆ, ಅಕ್ಷತಾ ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular