Saturday, August 1, 2026
Homeಜಿಲ್ಲೆಉಳ್ಳಾಲ: ಕೆಸರು ನೀರಿಗೆ ಬಿದ್ದು ಬಾಲಕ ಕಾಣೆ, ಶೋಧ ಕಾರ್ಯ ಮುಂದುವರಿಕೆ.

ಉಳ್ಳಾಲ: ಕೆಸರು ನೀರಿಗೆ ಬಿದ್ದು ಬಾಲಕ ಕಾಣೆ, ಶೋಧ ಕಾರ್ಯ ಮುಂದುವರಿಕೆ.

ಉಳ್ಳಾಲ : ಉಳ್ಳಾಲ ತಾಲೂಕಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಆಮ್ಲ ಮೊಗರು ಗ್ರಾಮದ ಮದಕ ಪ್ರದೇಶದಲ್ಲಿ 16 ವರ್ಷದ ಬಾಲಕನೊಬ್ಬ ಕೆಸರು ನೀರಿಗೆ ಬಿದ್ದು ಕಾಣೆಯಾಗಿರುವ ಘಟನೆ ವರದಿಯಾಗಿದೆ.

ಕಾಣೆಯಾದ ಬಾಲಕನನ್ನು ಸೃಜನ್ (16), ಶಿವರಾಮ್ ಅವರ ಪುತ್ರ, ಜರಿ ಹೌಸ್, ಅಂಬ್ಲಮೊಗರು ನಿವಾಸಿ ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ, ಸೃಜನ್ ತನ್ನ ಇಬ್ಬರು ಸ್ನೇಹಿತರೊಂದಿಗೆ ನಿಟ್ಟೆ ವಿದ್ಯಾ ಸಂಸ್ಥೆಗೆ ಸೇರಿದ ಜಮೀನಿನಲ್ಲಿ ಮೀನು ಹಿಡಿಯಲು ಹೋಗಿದ್ದಾನೆ. ಮೀನು ಹಿಡಿಯುವ ವೇಳೆ ಬಳಿಕ ಕೈ-ಕಾಲು ತೊಳೆಯಲು ಮಣ್ಣು ತುಂಬಿದ ಕೆಸರು ನೀರಿಗೆ ಇಳಿದಾಗ, ಸೃಜನ್ ಆಕಸ್ಮಿಕವಾಗಿ ನೀರಿಗೆ ಬಿದ್ದು ಕಾಣೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ನಂತರ, ಜೊತೆಯಲ್ಲಿದ್ದ ಸ್ನೇಹಿತರು ಈ ವಿಷಯವನ್ನು ಯಾರಿಗೂ ತಿಳಿಸದೇ ಮನೆಗೆ ಹಿಂತಿರುಗಿದ್ದಾರೆ. ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಸೃಜನ್ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬದವರು ವಿಚಾರಿಸಿದಾಗ ಸ್ನೇಹಿತರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದೀಗ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು, ಕಾಣೆಯಾದ ಬಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular