ಬೆಳ್ತಂಗಡಿ : ನಿಡ್ಲೆ ಗ್ರಾಮದ ಬೂದುಜಾಲು ಬಳಿ ಮಂಗಳವಾರ ಡಿ.27ರಂದು ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಟೂರಿಸ್ಟ್ ಬಸ್ ಚಾಲಕ ಅಭಿಷೇಕ್ ಹಾಗೂ ಪ್ರಯಾಣಿಕ ದುರ್ಗೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಂಧನೂರು ಕಾಲೇಜಿನ ವಿದ್ಯಾರ್ಥಿಗಳನ್ನು ಹೊತ್ತ ಟೂರಿಸ್ಟ್ ಬಸ್ ಧರ್ಮಸ್ಥಳ ಕಡೆಗೆ ಸಾಗುತ್ತಿದ್ದರೆ ಕೆಎಸ್‌ಆರ್‌ಟಿಸಿ ಬಸ್ ಕೊಕ್ಕಡ ಕಡೆಗೆ ಚಲಿಸುತ್ತಿತ್ತು. ಗಾಯಾಳುಗಳನ್ನು ಸ್ಥಳೀಯರು ಮತ್ತು ಶೌರ್ಯ ತಂಡದ ಸದಸ್ಯರು ಉಜಿರೆ ಮತ್ತು ಪುತ್ತೂರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರವಾಸಿ ಬಸ್‌ನಲ್ಲಿ 40 ವಿದ್ಯಾರ್ಥಿಗಳು, ನಾಲ್ವರು ಉಪನ್ಯಾಸಕರು ಮತ್ತು ಒಬ್ಬ ಅಡುಗೆಯವರು ಪ್ರಯಾಣಿಸುತ್ತಿದ್ದರು.