Wednesday, November 5, 2025
Flats for sale
Homeವಿದೇಶಯೇತಿ ಏರ್‌ಲೈನ್ಸ್‌ ಪತನಕ್ಕೂ ಮುನ್ನ ಫೇಸ್'ಬುಕ್ ಲೈವ್ ವಿಡಿಯೋ ಮಾಡಿದ್ದ ಯುಪಿ ಯುವಕ, ಅಂತಿಮ ಕ್ಷಣದ...

ಯೇತಿ ಏರ್‌ಲೈನ್ಸ್‌ ಪತನಕ್ಕೂ ಮುನ್ನ ಫೇಸ್’ಬುಕ್ ಲೈವ್ ವಿಡಿಯೋ ಮಾಡಿದ್ದ ಯುಪಿ ಯುವಕ, ಅಂತಿಮ ಕ್ಷಣದ ದೃಶ್ಯ ಸೆರೆ!

ಲಖನೌ (ಉತ್ತರ ಪ್ರದೇಶ): ಯೇತಿ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನ ನೆಲಕ್ಕಪ್ಪಳಿಸುವುದಕ್ಕೂ ಮುನ್ನ ಪ್ರಯಾಣಿಕರೊಬ್ಬರು ಫೇಸ್’ಬುಕ್ ಲೈವ್ ವಿಡಿಯೋ ಮಾಡಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಸೋನು ಜೈಸ್ವಾಲ್‌ ಎಂಬುವರು ಫೇಸ್‌ಬುಕ್‌ ಲೈವ್‌ ಆರಂಭಿಸಿದ್ದರಷ್ಟೇ. ಆಗ ವಿಮಾನ ಅಲ್ಲಾಡತೊಡಗಿದ ದೃಶ್ಯಗಳು ವಿಡಿಯೋದಲ್ಲಿ ಕಂಡು ಬಂದಿದೆ.

1 ನಿಮಿಷ 30 ಸೆಕೆಂಡ್‌ಗಳಿರುವ ಈ ವಿಡಿಯೋದಲ್ಲಿ ಪ್ರಯಾಣಿಕರ ಚೀರಾಟ ಹಾಗೂ ಬೆಂಕಿಯ ಜ್ವಾಲೆಗಳು ಕಂಡು ಬಂದಿದೆ.

ಅಪಘಾತಕ್ಕೆ ಕೆಲವು ಸೆಕೆಂಡ್​​ಗಳ ಮೊದಲಿನ ವಿಡಿಯೋ ಇದು ಎನ್ನಲಾಗುತ್ತಿದ್ದು, ಫೇಸ್‌ಬುಕ್‌ನಲ್ಲಿನ 1.3 ನಿಮಿಷಗಳ ಲೈವ್ ವಿಡಿಯೋದಲ್ಲಿ, ಅವರಲ್ಲಿ ಒಬ್ಬರು “ಮೌಜ್ ಕರ್ ದಿ” (ಇದು ಮೋಜಿನ ಸಂಗತಿ) ಎಂದು ಕೂಗಿರುವುದು ಕಂಡು ಬಂದಿದೆ.

ವಿಮಾನ ಪತನ ದುರಂತದಲ್ಲಿ ಐವರು ಭಾರತೀಯರು ಸಾವನ್ನಪ್ಪಿದ್ದು, ಮೃತರನ್ನು ಮೃತಪಟ್ಟ ಭಾರತೀಯರನ್ನು ಅಭಿಷೇಕ್ ಕುಶ್ವಾಹಾ (25), ವಿಶಾಲ್‌ ಶರ್ಮಾ (22), ಅನಿಲ್ ಕುಮಾರ್ ರಾಜ್ಬರ್ (27), ಸೋನು ಜೈಸ್ವಾಲ್‌ (35) ಮತ್ತು ಸಂಜಯ್‌ ಜೈಸ್ವಾಲ್‌ ಎಂದು ಗುರುತಿಸಲಾಗಿದೆ.

ಇವರು ಪೋಖರಾಗೆ ಪ್ಯಾರಾಗ್ಲೈಡಿಂಗ್‌ ಮಾಡಲು ತೆರಳುತ್ತಿದ್ದರು. ಶುಕ್ರವಾರವಷ್ಟೇ ಕಾಠ್ಮಂಡುವಿಗೆ ಬಂದಿದ್ದರೆಂದು ತಿಳಿದುಬಂದಿದೆ.

72 ಜನರಿದ್ದ ನೇಪಾಳದ ಯೇತಿ ಏರ್‌ಲೈನ್ಸ್‌ಗೆ ಸೇರಿದ ವಿಮಾನ ನೇಪಾಳದ ಪೋಖರಾ ವಿಮಾನ ನಿಲ್ದಾಣದ ಬಳಿ ನಿನ್ನೆ ಭೀಕರ ಅಪಘಾತಕ್ಕೆ ತುತ್ತಾಗಿತ್ತು. ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 68 ಪ್ರಯಾಣಿಕರು, ನಾಲ್ವರು ಸಿಬ್ಬಂದಿ ಸೇರಿ ಎಲ್ಲಾ 72 ಜನರು ಸಾವನ್ನಪ್ಪಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular