Thursday, March 27, 2025
Flats for sale
Homeಕ್ರೈಂಉಳ್ಳಾಲ : ಕಾಯಿ ಕೀಳೋ ನೆಪದಲ್ಲಿ ಒಬ್ಬಂಟಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ,ಕೊಣಾಜೆಯಲ್ಲಿ ಪೋಕ್ಸೊ ಪ್ರಕರಣ.ಆರೋಪಿಯ ಬಂಧನಕ್ಕೆ...

ಉಳ್ಳಾಲ : ಕಾಯಿ ಕೀಳೋ ನೆಪದಲ್ಲಿ ಒಬ್ಬಂಟಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ,ಕೊಣಾಜೆಯಲ್ಲಿ ಪೋಕ್ಸೊ ಪ್ರಕರಣ.ಆರೋಪಿಯ ಬಂಧನಕ್ಕೆ ಬಜರಂಗದಳ ಆಗ್ರಹ.

ಉಳ್ಳಾಲ:ಡಿ.13 ತೆಂಗಿನ ಕಾಯಿ ಕೀಳಲೆಂದು ಬಂದ ಪರಿಚಯಸ್ಥ ವ್ಯಕ್ತಿಯೊಬ್ಬ ಮನೆಯಲ್ಲಿ ಒಬ್ಬಂಟಿಯಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು,ತಲೆ ಮರೆಸಿರುವ ಆರೋಪಿಯನ್ನ ಶೀಘ್ರ ಬಂಧಿಸುವಂತೆ ಬಜರಂಗದಳ ಆಗ್ರಹಿಸಿದೆ.

ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಬಶೀರ್(29)ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿದ್ದಾನೆ.

ಪ್ಲಂಬರ್ ಆಗಿರುವ ಬಶೀರ್ ಸೋಮವಾರ ಸಂಜೆ ದೇರಳಕಟ್ಟೆಯ ಸಂಬಂಧಿಕರ ಮನೆಗೆ ತೆರಳಿದ್ದು ಈ ವೇಳೆ ಪಕ್ಕದ ಪರಿಚಯಸ್ಥರ ಮನೆಗೆ ಕಾಯಿ ಕೀಳಲೆಂದು ತೆರಳಿದ್ದಾನೆ.ಮನೆಯಲ್ಲಿ ಒಬ್ಬಂಟಿಯಿದ್ದ ಬಾಲಕಿಯನ್ನ ಕೈ ಹಿಡಿದು ಎಳೆದಿದ್ದು ಬಾಲಕಿ ಕಿರುಚಾಡಿದ್ದಾಳೆ.ಬಾಲಕಿಯ ಕೂಗನ್ನ ಕೇಳಿಸಿದ ನೆರೆಹೊರೆಯವರು ಓಡಿ ಬಂದಿದ್ದು ಅದಾಗಲೇ ಆರೋಪಿ ಸ್ಥಳದಿಂದ ಪಲಾಯನಗೈದಿದ್ದಾನೆ.


ಸಂತ್ರಸ್ತ ಬಾಲಕಿಯ ಕುಟುಂಬವು ಆರೋಪಿ ಬಶೀರನ ಆಪ್ತರಾಗಿದ್ದು ಕೆಲ ತಿಂಗಳ ಹಿಂದಷ್ಟೆ ನಡೆದಿದ್ದ ಬಶೀರನ ಸಹೋದರಿಯ ಮದುವೆ ಸಮಾರಂಬದಲ್ಲೂ ಭಾಗವಹಿಸಿದ್ದರಂತೆ.

ಬಾಲಕಿಯ ಕುಟುಂಬ ಆರೋಪಿಯ ವಿರುದ್ಧ ದೂರು ನೀಡಲು ಹಿಂಜರಿದಿದ್ದು ನರೆಹೊರೆಯವರ ಒತ್ತಾಯದ ಮೇರೆಗೆ ಸಂತ್ರಸ್ತೆಯ ತಾತ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಆರೋಪಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಹಿಂದೂ ಸಮಾಜದ ಮೇಲೆ ಅನ್ಯಮತೀಯರು ಪದೇ ಪದೇ ನಂಬಿಕೆ‌ ದ್ರೋಹ ಎಸಗುತ್ತಿದ್ದು ಬಾಲಕಿಗೆ ಕಿರುಕುಳ ನೀಡಿದ ಆರೋಪಿ ಬಶೀರನನ್ನ ಶೀಘ್ರ ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್,ಬಜರಂಗದಳದ ಪ್ರಮುಖರಾದ ಗೋಪಾಲ್ ಕುತ್ತಾರು,ಪದ್ಮನಾಭ ಮರ್ಕೆದು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular