Friday, November 22, 2024
Flats for sale
Homeಜಿಲ್ಲೆಉಳ್ಳಾಲ: ಅಂಬ್ಲಮೊಗರಲ್ಲಿ ರಸ್ತೆ ಅಪಘಾತ, ವೈದ್ಯಕೀಯ ವಿದ್ಯಾರ್ಥಿ ಸಾವು.ಹೈಕೋರ್ಟ್ ನ್ಯಾಯಾಧೀಶ ದೌಡು.

ಉಳ್ಳಾಲ: ಅಂಬ್ಲಮೊಗರಲ್ಲಿ ರಸ್ತೆ ಅಪಘಾತ, ವೈದ್ಯಕೀಯ ವಿದ್ಯಾರ್ಥಿ ಸಾವು.ಹೈಕೋರ್ಟ್ ನ್ಯಾಯಾಧೀಶ ದೌಡು.

ಉಳ್ಳಾಲ: ಡಿ.13ರಸ್ತೆ ಅಪಘಾತದಲ್ಲಿ ಬೈಕ್ ಸವಾರ ವೈದ್ಯ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದು ಸಹಸವಾರ ಗಂಭೀರ ಗಾಯಗೊಂಡ ಘಟನೆ ಅಂಬ್ಲಮೊಗರುವಿನ ಮಜಲ್ ಬೈಲ್ ಎಂಬಲ್ಲಿ ನಡೆದಿದ್ದು,ಸೋದರಳಿಯನ ಸಾವಿನ‌ ಸುದ್ದಿ ಕೇಳಿ ಹೈಕೋರ್ಟ್ ನ್ಯಾಯಾಧೀಶರೆ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಹೈಕೋರ್ಟ್ ನ್ಯಾಯಾಧೀಶ ರಂಗಸ್ವಾಮಿ ನಟರಾಜ್ ಅವರ ಸೋದರಳಿಯ ಬೆಂಗಳೂರು ರಾಮಯ್ಯ ರೋಡ್ ನಿವಾಸಿ ಸಿದ್ಧರಾಜು ಅವರ ಪುತ್ರ ನಿಶಾಂತ್ ಎ.ಎಸ್ (23)ಮೃತ ವಿದ್ಯಾರ್ಥಿ.ಸಹ ಸವಾರ ಮತ್ತೋರ್ವ ವಿದ್ಯಾರ್ಥಿ ಶಾಕಿಬ್ (23)ಗಂಭೀರ ಗಾಯಗೊಂಡಿದ್ದಾನೆ.ನಿಶಾಂತ್ ಮತ್ತು ಶಾಕಿಬ್ ಇಬ್ಬರೂ ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿ ದ್ವಿತೀಯ ವರ್ಷದ ಇಂಟನ್೯ಶಿಪ್ ನಡೆಸುತ್ತಿದ್ದರು.

ನಿನ್ನೆ ರಾತ್ರಿ ಮಜಲ್ ಬೈಲ್ ರಸ್ತೆಯಿಂದ ಬೈಕಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೋ ಅಥವಾ ಯಾವುದೋ ವಾಹನ ಢಿಕ್ಕಿ ಹೊಡೆದಿದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಅಪಘಾತ ಸ್ಥಳ ಮತ್ತು ಆಸ್ಪತ್ರೆಗೆ ಹೈಕೋರ್ಟ್ ನ್ಯಾಯಾಧೀಶರಾದ ರಂಗಸ್ವಾಮಿ ನಟರಾಜ್ ಭೇಟಿ ನೀಡಿದ್ದಾರೆ.ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular