ಪುತ್ತೂರು : ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ನಾಗದೇವರ ಕಟ್ಟೆಗೆ ಅನ್ಯಮತೀಯ ವ್ಯಕ್ತಿಯಿಂದ ಹಾನಿಯಾದ ಘಟನೆ ನಡೆದಿದೆ . ನಿನ್ನೆ ತಡ ರಾತ್ರೆ ಏಕಾಏಕಿ ನಾಗನಕಟ್ಟೆಗೆ ನುಗ್ಗಿ ಗೇಟ್ ಹಾಗೂ ಇತರ ಸಾಮಾಗ್ರಿಗಳನ್ನು ಮಹಮ್ಮದ್ ಸಲಾಂ ಎನ್ನುವ ಯುವಕ ಹಾನಿಗೊಳಿಸಿದ್ದಾನೆ. ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ಆರೋಪಿ ಗಾಂಜಾ ವ್ಯಸನಿಯೆಂದು ತಿಳಿದಿದೆ. ಸ್ಥಳಕ್ಕೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಪ್ರಮುಖರು ಭೇಟಿ ನಿದ್ದಿದ್ದು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ತುಳುವರು ಭಕ್ತಿಯಿಂದ ಪೂಜಿಸುವ ಪುತ್ತೂರು ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ನಾಗದೇವರ ಕಟ್ಟೆಗೆ ಸಲಾಂ ಎಂಬಾತ ಮತಾಂದ ಹಾನಿಯುಂಟುಮಾಡಲು ಯತ್ನಿಸಿರುವುದನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಹಿಂದೂ ವಿರೋಧಿ ಶಕ್ತಿಗಳು ವಿನಾಕಾರಣ ಹಿಂದುಗಳ ಆರಾಧನ ಸ್ಥಳಗಳಿಗೆ ಹಾನಿಯುಂಟು ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿದ್ದು.ಇಂತಹ ಮನಸ್ಥಿತಿಯ ವ್ಯಕ್ತಿಗಳ ಬಗ್ಗೆ ಸರಕಾರ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಕ್ಕೆ ಇಲಾಖೆ ಹಾಗು ಸರಕಾರ ಹೊಣೆಯಾಗಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಆಗ್ರಹಿಸಿದೆ.