ಮಂಗಳೂರು : ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ, ಹಾಸ್ಟೆಲ್ ಮತ್ತು ಹೋಂಸ್ಟೇಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳು ನಡೆಸುವ ಹಾಸ್ಟೆಲ್‌ಗಳು, ಹೋಂಸ್ಟೇಗಳು, ಪೇಯಿಂಗ್ ಗೆಸ್ಟ್ ಸರ್ವೀಸ್ ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಉದ್ದೇಶದ ಅತಿಥಿ ಗೃಹಗಳು, ವಸತಿಗೃಹಗಳು ಮತ್ತು ಬೋರ್ಡಿಂಗ್‌ಗಳನ್ನು ನಡೆಸುವ ಮಾಲೀಕರು ಮತ್ತು ಪಾಲುದಾರರು ಕಡ್ಡಾಯವಾಗಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಬೇಕು.
ಸಂಸ್ಥೆಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಗುರುತಿನ ಚೀಟಿ ಮತ್ತು ರಿಜಿಸ್ಟರ್ ಪುಸ್ತಕವನ್ನು ಕಡ್ಡಾಯವಾಗಿ ಪ್ರತಿ ವರ್ಷ ಪೊಲೀಸ್ ಆಯುಕ್ತರ ಕಚೇರಿ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಹಾಜರುಪಡಿಸಬೇಕು.