Tuesday, July 14, 2026
Homeಜಿಲ್ಲೆಉಡುಪಿ : ರಾ.ಹೆ. 66ರಲ್ಲಿ ಯುವಕನ ಹುಚ್ಚಾಟ ; ಹೆದ್ದಾರಿ ಮಧ್ಯೆ ಟಿವಿ, ಮ್ಯೂಸಿಕ್ ಹಾಕಿ...

ಉಡುಪಿ : ರಾ.ಹೆ. 66ರಲ್ಲಿ ಯುವಕನ ಹುಚ್ಚಾಟ ; ಹೆದ್ದಾರಿ ಮಧ್ಯೆ ಟಿವಿ, ಮ್ಯೂಸಿಕ್ ಹಾಕಿ ವಾಹನ ಸಂಚಾರಕ್ಕೆ ಅಡ್ಡಿ, ಪೊಲೀಸರ ಮೇಲೆ ಕತ್ತಿ ಬೀಸಿ ಹಲ್ಲೆಗೆ ಯತ್ನ, ಬಂಧನ.

ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ಕೋಟ ಸಮೀಪ ಹೆದ್ದಾರಿ ಮಧ್ಯೆ ಟೇಬಲ್ ಇಟ್ಟು, ಟಿವಿ ಹಾಗೂ ಸಂಗೀತ ವ್ಯವಸ್ಥೆ ಅಳವಡಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಯುವಕನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬೆಲ್ಲದ ಗಣಪತಿ ದೇವಸ್ಥಾನ ಸಮೀಪದ ನಿವಾಸಿ ರಂಜಿತ್ ಸೋಮಯಾಜಿ (25) ಎಂದು ಗುರುತಿಸಲಾಗಿದೆ.
ಸೋಮವಾರ ಹೆದ್ದಾರಿ ಮಧ್ಯೆ ಟೇಬಲ್ ಇಟ್ಟು, ಟಿವಿ ಹಾಗೂ ಮ್ಯೂಸಿಕ್ ವ್ಯವಸ್ಥೆ ಹಾಕಿ ವಾಹನಗಳನ್ನು ತಡೆದಿದ್ದರಿಂದ ಕೆಲಕಾಲ ವಾಹನ ಸವಾರರು ಆತಂಕಕ್ಕೊಳಗಾದರು. ಉದ್ದನೆಯ ತಲೆಕೂದಲು ಮತ್ತು ಗಡ್ಡ ಹೊಂದಿದ್ದ ಯುವಕನ ವಿಚಿತ್ರ ವರ್ತನೆ ಕಂಡ ಸ್ಥಳೀಯರು ತಕ್ಷಣ ಕೋಟ ಪೊಲೀಸರಿಗೆ ಮಾಹಿತಿ ನೀಡಿದರು.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ ವೇಳೆ ರಂಜಿತ್ ಪೊಲೀಸರ ಮೇಲೆಯೇ ಕತ್ತಿ ಬೀಸಿ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.

ಪ್ರಾಥಮಿಕ ವಿಚಾರಣೆಯಲ್ಲಿ ಯುವಕ ಮಾನಸಿಕ ಅಸ್ವಸ್ಥನಾಗಿರಬಹುದೆಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಆತ ಮಾನಸಿಕ ಚಿಕಿತ್ಸೆಗೆ ಒಳಗಾಗಿರುವ ಕುರಿತು ಯಾವುದೇ ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular