ಮಂಗಳೂರು: ಬ್ಲಾಕ್ ಮೇಲ್ ಗೆ ಒಳಗಾದ ಓರ್ವ ಯುವಕ ಆತ್ಮಹತ್ಯೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಇನ್ಸ್ಟಾಗ್ರಾಂ ನಲ್ಲಿ ವ್ಯಕ್ತಿಯಿಂದ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ನಂತರ ಹಣಕ್ಕಾಗಿ ಬೆದರಿಕೆ ಹಾಕಿದ ಪರಿಣಾಮ ಧರ್ಮಸ್ಥಳ ನಿವಾಸಿ ಹರ್ಷಿತ್(19) ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ 15 ದಿನದ ಹಿಂದೆ ಇನ್ಸ್ಟಾಗ್ರಾಂ ನಲ್ಲಿ ಅಪರಿಚಿತ ವ್ಯಕ್ತಿ ಪರಿಚಯವಾಯಿತು ಚಾಟಿಂಗ್ ನಲ್ಲಿ ಇಬ್ಬರು ತೊಡಗಿಕೊಂಡಿರುವುದರಿಂದ
ಮೊಬೈಲ್ ಗೆ ವಿಡಿಯೋ ಕಾಲ್ ನಲ್ಲಿ ನಿನ್ನ ಬೆತ್ತಲೆ ವಿಡಿಯೋ ಚಿತ್ರಿಸಿದ್ದೆನೆ ಎಂದು ಬ್ಲ್ಯಾಕ್ ಮಾಡಿದ್ದಾನೆ .11 ಸಾವಿರಕ್ಕೆ ಬೇಡಿಕೆ ಇಟ್ಟ ಕಾರಣ
ಹಣ ಹೊಂದಿಸಲಾಗದೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.