ಮಂಗಳೂರು ; ನಗರದ ಪದವು ಗ್ರಾಮದ ಕೋಟಿಮುರ ಎಂಬಲ್ಲಿ ಕುಲಶೇಖರ ಸೇಕ್ರೆಡ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಜ್ಞಾನೇಶ್(14) ಆತ್ಮಹತ್ಯೆ ಗೆ ಶರಣಾದ ಘಟನೆ ನಡೆದಿದೆ.
ಡಿ ಬ್ರಿಕ್ಸ್ ಅಪಾರ್ಟ್ಮೆಂಟ್ ನ ಜಗದೀಶ್ ಹಾಗೂ ವಿನಯ ದಂಪತಿಯ ಪುತ್ರ ಜ್ಞಾನೇಶ್ . ಮೊಬೈಲ್ ಬಳಸುವ ವಿಚಾರವಾಗಿ ಜ್ಞಾನೇಶ್ ಗೆ ತಾಯಿ ಗದರಿಸಿದಕ್ಕಾಗಿ ಆತ್ಮಹತ್ಯೆ ಮಾಡಿದಾನೆಂದು ತಿಳಿದುಬಂದಿದೆ.
ಸ್ನಾನ ಮಾಡಿ ಬರುವುದಾಗಿ ಹೇಳಿ ರೂಮಿನೊಳಗೆ ಹೋಗಿದ್ದ ಜ್ಞಾನೇಶ್
ಹೊರಗೆ ಬಾರದಿದ್ದಾಗ ಬಾತ್ ರೂಮ್ ಕಿಟಕಿ ಒಡೆದು ರೂಮಿನೊಳಗೆ ಹೋದ ತಂದೆ ಈ ವೇಳೆ ಜ್ಞಾನೇಶ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಮಂಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು.