Thursday, March 27, 2025
Flats for sale
Homeರಾಜ್ಯಬೆಂಗಳೂರು : ಮೈಸೂರು-ಬೆಂಗಳೂರು ಹೈವೇಗೆ "ಕಾವೇರಿ ಎಕ್ಸ್ ಪ್ರೆಸ್ ವೇ" - ಹೆಸರಿಡಲು ಸಂಸದ ಪ್ರತಾಪ್...

ಬೆಂಗಳೂರು : ಮೈಸೂರು-ಬೆಂಗಳೂರು ಹೈವೇಗೆ “ಕಾವೇರಿ ಎಕ್ಸ್ ಪ್ರೆಸ್ ವೇ” – ಹೆಸರಿಡಲು ಸಂಸದ ಪ್ರತಾಪ್ ಸಿಂಹ ಮನವಿ .

ಬೆಂಗಳೂರು : ಮಧ್ಯಪ್ರದೇಶದ “ನರ್ಮದಾ ಎಕ್ಸ್ ಪ್ರೆಸ್ ವೇ” ಉತ್ತರ ಪ್ರದೇಶದ “ಯಮುನಾ ಎಕ್ಸ್ ಪ್ರೆಸ್ ವೇ”, “ಗಂಗಾ ಎಕ್ಸ್ ಪ್ರೆಸ್ ವೇ”, ನಂತೆಯೇ ಮೈಸೂರು-ಬೆಂಗಳೂರು ಹೈವೇಗೆ “ಕಾವೇರಿ ಎಕ್ಸ್ ಪ್ರೆಸ್ ವೇ” ಎಂದು ಹೆಸರಿಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿಕೊಂಡಿದ್ದಾರೆ .

ಕನ್ನಡ ನಾಡಿನ ಜೀವನದಿ ಎಂದು ಹೆಸರಾಗಿರು ಕಾವೇರಿ ತಾಯಿಯ ಹೆಸರಿಡಬೇಕೆಂದು ,ಹಾಗೂ ಮೈಸೂರ್ ಬೆಂಗಳೂರಿನ ಜನರು ಈ ಕಾವೇರಿ ನೀರನ್ನೇ ಕುಡಿಯುವುದರಿಂದ ಈ ಹೆಸರಿಗೆ ಮಹತ್ವ ಇದೆ .10 ಪಥಗಳ ರಾಜ್ಯದ ಎಕ್ಸ್‌ಪ್ರೆಸ್‌ವೇಗೆ ಕಾವೇರಿ ನದಿಯ ಹೆಸರನ್ನೇ ಏಕೆ ಇಡಬೇಕೆಂದು ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಒತ್ತಾಯಿಸಿದ್ದಾರೆ.

“ಈಗಾಗಲೇ ಭಾಗಶಃ ತೆರೆಯಲಾದ 119 ಕಿಮೀ ಉದ್ದದ ದಶಪಥಗಳ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು ಭಾರತಮಾಲಾ ಪರಿಯೋಜನಾ ಹಂತ ಒಂದರ ಅಡಿಯಲ್ಲಿ ನಿರ್ಮಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇಯಿಂದ ಹಲವು ರೀತಿಯ ಪ್ರಯೋಜನಗಳಿವೆ. ಆರ್ಥಿಕ ಬೆಳವಣಿಗೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಬಲೀಕರಣ, ಪರಿಸರ ಸಂರಕ್ಷಣೆ ಸೇರಿದಂತೆ ಉಭಯ ನಗರಗಳಿಗೆ ಬಹಳಷ್ಟು ಅನುಕೂಲ ಕಲ್ಪಿಸಲಿದೆ”.

“ದೇಶದಲ್ಲಿ ನಿರ್ಮಿಸಲಾದ ಅಥವಾ ನಿರ್ಮಾಣ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇಗಳಿಗೆ ಪವಿತ್ರ ನದಿಗಳಾದ ಯಮುನಾ ಎಕ್ಸ್‌ಪ್ರೆಸ್‌ವೇ ಮತ್ತು ಉತ್ತರ ಪ್ರದೇಶದ ಗಂಗಾ ಎಕ್ಸ್‌ಪ್ರೆಸ್‌ವೇ ಮತ್ತು ಮಧ್ಯಪ್ರದೇಶದ ನರ್ಮದಾ ಎಕ್ಸ್‌ಪ್ರೆಸ್‌ವೇಗಳ ಹೆಸರನ್ನು ಇಡಲಾಗಿದೆ. ಏಕೆಂದರೆ ನದಿಗಳು ನಮ್ಮ ದೇಶದ ಇತಿಹಾಸ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ನಂಬಿಕೆಯನ್ನು ರೂಪಿಸಿವೆ,” ಎಂದು ಸಂಸದರು ವಿವರಿಸಿದ್ದಾರೆ.

“ಪಶ್ಚಿಮಘಟ್ಟದ ಬ್ರಹ್ಮಗಿರಿ ಬೆಟ್ಟಗಳಲ್ಲಿ ಹುಟ್ಟುವ ದೇಶದ ಅತ್ಯಂತ ಪವಿತ್ರ ನದಿಗಳಲ್ಲಿ ಒಂದಾದ ಕಾವೇರಿ ನದಿಯ ಹೆಸರನ್ನು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಇಡಲು ಕೇಂದ್ರ ಸರ್ಕಾರವನ್ನು ಮೆಚ್ಚಿಸುವಂತೆ ಇತಿಹಾಸಕಾರರು ಸೇರಿದಂತೆ ನನ್ನ ಸಂಸದೀಯ ಕ್ಷೇತ್ರದ ಪ್ರಮುಖ ನಾಗರಿಕರು ನನ್ನನ್ನು ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಕೂಡಾ ಇದನ್ನೇ ಪ್ರಸ್ತಾಪಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಸಿಂಹ ಬರೆದಿದ್ದಾರೆ.

ಸಾಂಸ್ಕೃತಿಕ ರಾಜಧಾನಿ ಮೈಸೂರಿನ ನಡುವೆ ನಿರ್ಮಾಣವಾದ ರಾಜ್ಯದ ಮೊದಲ ಎಕ್ಸ್‌ಪ್ರೆಸ್‌ವೇ ಇದಾಗಿದ್ದು, ಈ ಹೆದ್ದಾರಿ ನಿರ್ಮಾಣ ವಿಚಾರವಾಗಿ ಸಂಸದ ಪ್ರತಾಪ ಸಿಂಹ ವಿಶೇಷ ಕಾಳಜಿ ವಹಿಸಿದ್ದಾರೆ. ಇದು ಉಭಯ ನಗರಗಳ ಸಂಪರ್ಕ ಸಮಯವನ್ನು ಕೂಡಾ ಕಡಿಮೆ ಮಾಡುತ್ತದೆ. ತಲಾ ಮೂರರಂತೆ ಆರು ಪಥಗಳ ಎಕ್ಸ್‌ಪ್ರೆಸ್‌ ವೇ ಹಾಗೂ ತಲಾ ಎರಡು ಪಥಗಳ ಸರ್ವಿಸ್‌ ರಸ್ತೆಯನ್ನು ಇದು ಒಳಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular