ಮೈಸೂರು: ಈ ಸಮಾಜದಲ್ಲಿ ಏನೇನೋ ನಡೀತ ಇದೆ ಎಂಬುದು ಇಲ್ಲಿ ಗೊತ್ತಾಗೊತ್ತೆ .ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಂಜನಗೂಡು ತಾಲೂಕಿನ ಹುಣಸನಾಳು ಗ್ರಾಮದಲ್ಲಿ ನಡೆದಿದೆ.
ನಂಜನಗೂಡಿನ ಹುಣಸನಾಳು ಗ್ರಾಮದ ನಿವಾಸಿ.ಆತ್ಮಹತ್ಯೆ ಮಾಡಿಕೊಂಡ ಯುವಕ .ಮಹೇಂದ್ರ (20) ಮೃತ ಯುವಕ.
ತಾಯಿಯ ಬೇರೆ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಸಂಬಂಧದ ಬಗ್ಗೆ ಗಂಡ ಹೆಂಡತಿಯ ನಡುವೆ ಗಲಾಟೆ ಶುರುವಾಗಿತ್ತು. ಈ ವಿಷಯ ಮಗನಿಗೆ ತಿಳಿದ ಕೂಡಲೇ ಮನನೊಂದು ಯುವಕ ತಡರಾತ್ರಿ ರಾತ್ರಿ ನೇಣಿಗೆ ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.