ಮಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪಿಎ ಹೆಸರಿನಲ್ಲಿ ಸೋಮವಾರ ಬಂದಿರುವ ನಕಲಿ ಕರೆಗಳ ಬಗ್ಗೆ ತನಿಖೆ ನಡೆಸುವಂತೆ ಶಾಸಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಸಿಇಎನ್ ಪೊಲೀಸರಿಗೆ ನೀಡಿದ ದೂರಿನಲ್ಲಿ, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಎರಡು ಮಿಸ್ಡ್ ಕಾಲ್ ಬಂದಿರುವುದನ್ನು ಖಾದರ್ ನೆನಪಿಸಿಕೊಂಡಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರ ಹೆಸರಿನಲ್ಲಿ ನಂಬರ್ ಸೇವ್ ಮಾಡಲಾಗಿದೆ ಎಂದು ಟ್ರೂಕಾಲರ್ ಆ್ಯಪ್ ತೋರಿಸಿದೆ.
ಇದು ನಕಲಿ ಕರೆ ಎಂದು ತಿಳಿದುಕೊಂಡ ಅವರು, ನಕಲಿ ಫೋನ್ ಕರೆಯನ್ನು ಪತ್ತೆಹಚ್ಚಲು ಮತ್ತು ಕೃತ್ಯದ ಹಿಂದಿನ ಉದ್ದೇಶಗಳನ್ನು ಬಹಿರಂಗಪಡಿಸುವಂತೆ ಪೊಲೀಸರನ್ನು ಒತ್ತಾಯಿಸಿದರು.
ಅಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.