ರಾಯಚೂರು: ಹಸುವಿನ ಕರುವಿನ ಮೇಲೆ ಅತ್ಯಾಚಾರ ಎಸಗಿದ 24 ವರ್ಷದ ಯುವಕನನ್ನು ಪೋಲಿಸರು ರಾಯಚೂರು ಜಿಲ್ಲೆಯಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಆರೋಪಿಯನ್ನು ಇಮ್ತಿಯಾಜ್ ಹುಸೇನ್ ಮಿಯಾ ಎಂದು ಗುರುತಿಸಲಾಗಿದ್ದು, ಅಪರಾಧ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕರುವನ್ನು ಮಸೀದಿ ಬಳಿಯ ಕೃಷಿ ಜಮೀನಿನಲ್ಲಿ ಮರಕ್ಕೆ ಕಟ್ಟಿ ಹಾಕಿದ್ದರು. ಕರುವನ್ನು ಮಾಲೀಕರು ಗದ್ದೆಯಲ್ಲಿ ಇತರೆ ಹಸುಗಳೊಂದಿಗೆ ಮೇಯಲು ಬಿಟ್ಟಿದ್ದರು. ಕೃತ್ಯವನ್ನು ಕಂಡ ಜನರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಘಟನೆ ಕುರಿತು ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಾಥಮಿಕ ತನಿಖೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.