Monday, March 17, 2025
Flats for sale
Homeಸಿನಿಮಾಕಾಂತಾರ ಗೆಲುವಿಗೆ ದೈವಗಳೇ ಕಾರಣ,ಗುಳಿಗ,ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ಬುರ್ದುಗೋಳಿಗೆ ನಟಿ ಸಪ್ತಮಿ ಗೌಡ ಭೇಟಿ.

ಕಾಂತಾರ ಗೆಲುವಿಗೆ ದೈವಗಳೇ ಕಾರಣ,ಗುಳಿಗ,ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ಬುರ್ದುಗೋಳಿಗೆ ನಟಿ ಸಪ್ತಮಿ ಗೌಡ ಭೇಟಿ.

ಉಳ್ಳಾಲ: ನ.17
ಜಗತ್ತಿನಾದ್ಯಂತ ಕಾಂತಾರ ಚಿತ್ರವು ಹೌಸ್ ಫುಲ್ ಪ್ರದರ್ಶನದೊಂದಿಗೆ 50 ದಿವಸ ಪೂರೈಸುತ್ತಿದ್ದು ಚಿತ್ರದ ಅದ್ಭುತ ಯಶಸ್ಸಿಗೆ ದೈವಗಳ ಆಶೀರ್ವಾದವೇ ಕಾರಣ ಎಂದು ಕಾಂತಾರ ಚಿತ್ರದ ಸಿಂಗಾರ ಸಿರಿ, ಲೀಲಾ ಖ್ಯಾತಿಯ ನಾಯಕಿ ನಟಿ ಸಪ್ತಮಿ ಗೌಡ ಹೇಳಿದರು.


ಅವರು ಕಲ್ಲಾಪಿನ ಬುರ್ದುಗೋಳಿಯ ಗುಳಿಗ,ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳಕ್ಕೆ ಕುಟುಂಬ,ಸ್ನೇಹಿತರೊಂದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ಬುರ್ದುಗೋಳಿ ಆದಿಸ್ಥಳ ಕ್ಷೇತ್ರದ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ನಾಯ್ಕ್ ಅವರು ಸಪ್ತಮಿ ಗೌಡ ಅವರನ್ನ ಬರಮಾಡಿ ಕ್ಷೇತ್ರದ ಐತಿಹ್ಯವನ್ನ ತಿಳಿಸಿದರು.


ಈ ವೇಳೆ ಮಾತನಾಡಿದ ಸಪ್ತಮಿ ಅವರು ವಿಶ್ವದಾದ್ಯಂತ ಕಾಂತಾರ ಸದ್ದು ಮಾಡುತ್ತಿದೆ.ಸಿನಿಮಾ ನಿರ್ಮಾಣದ ವೇಳೆ ಕರಾವಳಿ ಭಾಗದ ಆಚರಣೆ,ಸಂಸ್ಕೃತಿ ,ದೈವಾರಾದನೆ ಬಗ್ಗೆ ನಾನು ತಿಳಿದುಕೊಂಡೆ.ಇತ್ತೀಚಿಗೆ ನಡೆದ ವೈಯಕ್ತಿಕ ಘಟನೆಯೊಂದು ದೈವಗಳ ಬಗ್ಗೆ ಹುಟ್ಟಿದ ನಂಬಿಕೆ ಗಟ್ಟಿಯಾಗುವಂತೆ ಮಾಡಿದೆ.ಈಗಾಗಲೇ ಸಿನಿಮಾಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಬಂದಿದ್ದು ಸ್ಕ್ರಿಪ್ಟ್ ರೀಡಿಂಗ್ ನಡೀತಾ ಇದೆ.

ಜನರ ಪ್ರೀತಿಯಿಂದ ಜಗತ್ತಿನಾದ್ಯಂತ ಕಾಂತಾರ ಹೌಸ್ ಫುಲ್ ಆಗಿ ಓಡುತ್ತಿದ್ದು ತುಳುನಾಡಿನ ದೈವಗಳ ಆಶೀರ್ವಾದವೇ ಚಿತ್ರಕ್ಕೆ ಶ್ರೀರಕ್ಷೆ ಎಂದರು.


ಬಳಿಕ ಅವರು ಕುತ್ತಾರಿನ ಕೊರಗಜ್ಜನ ಆದಿಸ್ಥಳಕ್ಕೂ ತೆರಳಿ ಪ್ರಾರ್ಥನೆ ಸಲ್ಲಿಸಿದರು.ಸಪ್ತಮಿ ಗೌಡರ ತಾಯಿ ಶಾಂತ,ನಟ ಸನಿಲ್ ಗುರು, ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ನ ಪ್ರಮುಖರಾದ ಪ್ರವೀಣ್ ಎಸ್ .ಕುಂಪಲ,ಪುರುಷೋತ್ತಮ ಕಲ್ಲಾಪು,ಕಿಶೋರ್ ಕುಂಪಲ, ಕೌಶಿಕ್ ಸೆವಂತಿ ಗುಡ್ಡೆ,ಗೀತೇಶ್ ಮೊದಲಾದವರು ಜತೆಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular