Sunday, March 16, 2025
Flats for sale
Homeವಿದೇಶಸೌದಿ ಅರೇಬಿಯಾದ ಮೆಕ್ಕಾದಲ್ಲಿ ಹಠಾತ್ ಪ್ರವಾಹ, ನೂರಾರು ವಾಹನಗಳು ಜಖಾಂ.

ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಹಠಾತ್ ಪ್ರವಾಹ, ನೂರಾರು ವಾಹನಗಳು ಜಖಾಂ.

ಸೌದಿ ಅರೇಬಿಯಾ ; ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಶುಕ್ರವಾರ (ಡಿಸೆಂಬರ್ 23) ರಾತ್ರಿ ಸುರಿದ ಧಾರಾಕಾರ ಮಳೆಯ ನಂತರ ಹಠಾತ್ ಪ್ರವಾಹ ಸ್ಥಿತಿ ಉಂಟಾಗಿದೆ. ಈ ಪ್ರವಾಹ ನಗರದ ವಾಹನಗಳು ಮತ್ತು ಆಸ್ತಿಪಾಸ್ತಿಗಳಿಗೆ ಭಾರೀ ಹಾನಿಯನ್ನುಂಟು ಮಾಡಿದೆ. ಮೆಕ್ಕಾದಿಂದ ಹೊರಹೊಮ್ಮಿದ ಒಂದು ವೀಡಿಯೊದಲ್ಲಿ, ಭಾರಿ ನೀರಿನ ಪ್ರವಾಹದಲ್ಲಿ ವಾಹನಗಳು ಹೇಗೆ ಕೊಚ್ಚಿಕೊಂಡು ಹೋಗುತ್ತಿವೆ ಎಂಬುದನ್ನು ನೀವು ನೋಡಬಹುದು ಮತ್ತು ಅನೇಕ ಮುಖ್ಯ ರಸ್ತೆಗಳು ನೀರಿನಿಂದ ಹೇಗೆ ಆವ್ರುತ್ತವಾಗಿವೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು.

ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗಿನ ಜಾವದವರೆಗೆ ಮೆಕ್ಕಾದಲ್ಲಿ ಧಾರಾಕಾರ ಮಳೆ ಸುರಿದಿದೆ. ರಾಷ್ಟ್ರೀಯ ಹವಾಮಾನ ಕೇಂದ್ರವು ಶುಕ್ರವಾರ ಮಕ್ಕಾ ಪ್ರಾಂತ್ಯದಲ್ಲಿ ಹವಾಮಾನ ಎಚ್ಚರಿಕೆ ನೀಡಿದೆ. ಅಲ್ಲಿನ ರಾನಿಯಾ, ತೈಫ್, ಅದಮ್ ಮತ್ತು ಮೇಸನ್ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಪ್ರಮಾಣದ ಮಳೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಹಲವು ವಿಮಾನಗಳ ಹಾರಾಟವನ್ನು ಕೂಡ ರದ್ದುಗೊಳಿಸಲಾಗಿದೆ.

ನವೆಂಬರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು.
ಮೆಕ್ಕಾದ ಉತ್ತರದಲ್ಲಿರುವ ಜೆಡ್ಡಾ ಪ್ರಾಂತ್ಯದಲ್ಲಿ ಭಾರೀ ಮಳೆಯೊಂದಿಗೆ ಪ್ರವಾಹ ಮತ್ತು ಗುಡುಗು ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಕೇಂದ್ರವು ಎಚ್ಚರಿಕೆ ನೀಡಿದೆ. ನವೆಂಬರ್‌ನಲ್ಲಿಯೂ ಮಳೆಯಿಂದಾಗಿ ಕರಾವಳಿ ನಗರವಾದ ಜೆಡ್ಡಾದಲ್ಲಿ ಪ್ರವಾಹಕ್ಕೆ ಇಬ್ಬರು ಬಲಿಯಾಗಿದ್ದರು. ಆದರೆ ಇದೀಗ ಮತ್ತೊಮ್ಮೆ ಮಳೆ ಅಲ್ಲಿ ತೀವ್ರತರವಾದ ಹಾಹಾಕಾರ ಸೃಷ್ಟಿಸಿದೆ

RELATED ARTICLES

LEAVE A REPLY

Please enter your comment!
Please enter your name here

Most Popular