ಬೆಂಗಳೂರು : ಮೈಸೂರಿನಲ್ಲಿ (Mysuru) ಕೇಸ್ ಮೇಲೆ ಕೇಸ್ ದಾಖಲಾಗುತ್ತಿದ್ದಂತೆ ಸ್ಯಾಂಟ್ರೋ ರವಿ ರಾಜ್ಯದಿಂದಲೇ ಎಸ್ಕೇಪ್ ಆಗಿದ್ದ. ಈ ವೇಳೆ ಸ್ಯಾಂಟ್ರೋ ರವಿ ವಿದೇಶಕ್ಕೆ ಹಾರಿರಬಹುದು ಎನ್ನುವ ಬಗ್ಗೆಯೂ ಶಂಕಿಸಲಾಗಿತ್ತು.
ಆದರೆ ಇದೀಗ ಸ್ಯಾಂಟ್ರೋ ರವಿಯನ್ನು ಗುಜರಾತ್‌ನಲ್ಲಿ (Gujarat) ಬಂಧಿಸಲಾಗಿದೆ ಅಂತ ಪೊಲೀಸ್ ಮೂಲಗಳು ತಿಳಿಸಿವೆ.
ಸ್ಯಾಂಟ್ರೋ ರವಿ ಸೆರೆಗೆ ನಾಲ್ವರು SPಗಳ ವಿಶೇಷ ತಂಡ ರಾಮನಗರ, ಮಂಡ್ಯ, ಮೈಸೂರು, ಕೇರಳದಲ್ಲಿ ಕಾರ್ಯಚರಣೆ ಮಾಡಿತ್ತು. ಅಂತಿಮವಾಗಿ ಗುಜರಾತ್‌ನಲ್ಲಿ ಇರುವುದು ಸಿಕ್ಕ ಸುಳಿವಿನ ಮೇರೆಗೆ ರಾಜ್ಯ ಪೊಲೀಸರ ವಿಶೇಷ ತಂಡ ಕಾರ್ಯಚರಣೆ ನಡೆಸಿ ಅಡಗಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಪೊಲೀಸ್ ಇಲಾಖೆಯಿಂದ ತಿಳಿದುಬಂದ ಮಾಹಿತ ಪ್ರಕಾರ, ಗುಜರಾತ್‌ನಿಂದ ಸ್ಯಾಂಟ್ರೋ ರವಿಯನ್ನು ಬೆಂಗಳೂರಿಗೆ ಕರೆತಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸ್ಯಾಂಟ್ರೋ ರವಿ (Santro Ravi) ಮಾಂಸದಂಧೆಯ ಕಿಂಗ್ ಪಿನ್. ದಶಕಗಳ ಕಾಲ ವೇಶ್ಯಾವಾಟಿಕೆ ನಡೆಸುತ್ತಿದ್ದವನು ಇದ್ದಕ್ಕಿದ್ದಂತೆ ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಗೆ (police transfers) ಎಂಟ್ರಿ ಕೊಟ್ಟಿದ್ದ. ಈ ಬಗ್ಗೆ ಆಡಿಯೋ ವೈರಲ್ ಆಗಿದ್ದರು ಸಹಾ ಸಾಕಷ್ಟು ಅನುಮಾನಗಳಿದ್ದವು. ಅಸಲಿಗೆ ಸ್ಯಾಂಟ್ರೋ ರವಿ 25 ರೂಪಾಯಿ 50 ರೂಪಾಯಿ ವರ್ಗಾವಣೆಗಾಗಿ ಪಡೆದ 25 ಲಕ್ಷ ಅಡ್ವಾನ್ಸ್ ಹಾಗೂ 50 ಲಕ್ಷ ನಿಗದಿ ಮಾಡಿದ ಹಣ. ಮಾಂಸದಂಧೆಯ ಕಿಂಗ್ ಪಿನ್ ಕೆಲ ವರ್ಷಗಳ ಹಿಂದೆ ವರ್ಗಾವಣೆಗೆ ಕೈ ಹಾಕಿದ್ದ. ಕೋಟಿ ಕೋಟಿ ಹಣ ಲೂಟಿ ಮಾಡಿದ್ದ. ಈ ಸಂಬಂಧ ಹಲವು ಆಡಿಯೋಗಳು ಲಭ್ಯವಾಗಿದ್ದವು. ಕಂತೆ ಕಂತೆ ನೋಟುಗಳ ಮಧ್ಯೆ, ಚಿನ್ನದ ಬಿಸ್ಕೆಟ್ ಗಳು ಇರುವ ಫೋಟೋ. ರಾಜಕಾರಣಿಗಳು, ಪ್ರಭಾವಿಗಳ ಜೊತೆಗಿನ ಫೋಟೋ ವೈರಲ್ ಆಗಿತ್ತು.