ಮಂಗಳೂರು ; ಮಂಗಳೂರಿನ ಹೊರವಲಯದ ಸುರತ್ಕಲ್ ನ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ನಡೆದ ವರ್ಷಾವಧಿ ಜಾತ್ರೆಯ ನೆಮೋತ್ಸವಕ್ಕೆ ಈ ಬಾರಿ ಹೊಸ ಅಥಿತಿಗಳು ಅಂದರೆ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿ ಕೋಲವನ್ನು ವಿಕ್ಷಿಸಿದ ಘಟನೆ ನಡೆದಿದೆ.

ಪ್ರತಿವರ್ಷದ ದೇವಸ್ಥಾನದಲ್ಲಿರುವ ದೈವಗಳ ದೇವರ ಭೇಟಿ ಕಾರ್ಯಕ್ರಮ ಜಾತ್ರೆ ಸಂದರ್ಭ ನಡೆಯುತ್ತದೆ .ಈ ಬಾರಿ ಸಮೀಪದಲ್ಲಿರುವ ಎನ್‌ಐಟಿಕೆಯ ತಾಂತ್ರಿಕ ವಿದ್ಯಾಲಯದ ದೇಶ, ವಿದೇಶದ ವಿದ್ಯಾರ್ಥಿಗಳು ಬಂದು ಕೋಲ ವಿಕ್ಷಿಸಿದ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂತಾರ ಪ್ರಭಾವದಿಂದ ಎನ್‌ಐಟಿಕೆ ವಿದ್ಯಾರ್ಥಿಗಳು ಸಾಲುಗಟ್ಟಿ ಕ್ಷೇತ್ರದ ನೇಮಕ್ಕೆ ಆಗಮಿಸಿದ್ದಾರೆ.ನೇಮಕ್ಕೆ ಆಗಮಿಸಿ ವೀಕ್ಷಿಸಿ ಒಂದಿಷ್ಟು ಫೋಟೋ, ವೀಡಿಯೋ ಮಾಡಿಕೊಂಡಿದ್ದಾರೆ .
ದೈವಗಳ ಹಾವ ಭಾವ ಕಂಡು ಭಕ್ತಿಯಿಂದ ನೇಮ ವೀಕ್ಷಿಸಿದ್ದಾರೆ.
ಸ್ಥಳೀಯರು ಬೇರೆ ಭಾಗದ ವಿದ್ಯಾರ್ಥಿಗಳಿಗೆ ನೇಮದ ರೀತಿ ರಿವಾಜನ್ನು ವಿವರಿಸಿದ್ದಾರೆ .ತುಳುನಾಡಿನ ದೈವದರ್ಶನ ವಿಶ್ವ ದಲ್ಲೆಡೆ ಪ್ರಚಾರಪಡೆದ ಪರಿ ಇಲ್ಲಿ ಸ್ಮರಿಸಬಹುದು.