ಬೆಂಗಳೂರು : ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನಗೆ ಈಗ ಹತ್ಯೆ ಯತ್ನದ ಆರೋಪ ಸುರಳಿ ಸಿಲುಕಿದೆ. ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ಅವರ ಪತಿ ನಾರಾಯಣಸ್ವಾಮಿ ಕುಟುಂಬ ಸಮೇತ ಮನೆ ದೇವರು ಕದಿರಿ ನರಸಿಂಹಸ್ವಾಮಿ ದೇವರ ದರ್ಶನಕ್ಕೆ ತೆರಳಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ನಮ್ಮನ್ನು ಹತ್ಯೆ ಮಾಡಲು ಮುನಿರತ್ನ ಸಂಚು ರೂಪಿಸಿದ್ದರು. ನಮ್ಮಕಾರು ಹಿಂಬಾಲಿಸಿ ಹಂತಕರಿಗೆ ಮಾಹಿತಿ ನೀಡಲು ಅಂದಿನ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಸಿದ್ದೇಗೌಡ ಅವರನ್ನು ನಿಯೋಜಿಸಿದ್ದರು. ಇನ್ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ಅವರು ನನ್ನ ಪ್ರವಾಸದ ಮಾಹಿತಿಯನ್ನು ಸಂತೋಷ್‌ಗೆ ನೀಡಿದ್ದರು. ಈ ವಿಚಾರವಾಗಿ ಸಂತೋಷ್ ತಂದೆ ಸಿದ್ದೇಗೌಡ ಅವರು ಮುನಿರತ್ನ ಜತೆ ಜಗಳವಾಡಿದ್ದರು, ಇಂತಹ ಕೃತ್ಯಗಳಿಗೆ ಮಗನನ್ನು ಬಳಸಿಕೊಳ್ಳಬೇಡಿ ಎಂದು ಹೇಳಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2013 ರ ಡಿಸೆಂಬರ್ ತಿಂಗಳಲ್ಲಿ ನಾನು ಯಾವುದೇ ಗಲಾಟೆ ಮಾಡದಿದ್ದರೂ ವ್ಯಾಜ್ಯ ಬಿಡಿಸಲು ಠಾಣೆಗೆ ಹೋದ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಮುನಿರತ್ನ ಜೈಲಿಗೆ ಕಳುಹಿಸಿದ್ದರು. ಶಾಸಕರ ಸೂಚನೆಯಂತೆ ಪೊಲೀಸ್ ಸಿಬ್ಬಂದಿ ನನಗೆ ಹೊಡೆದು, ವಿವಸ್ತçಗೊಳಿಸಿ ಚಿತ್ರ ಹಿಂಸೆ ನೀಡಿದರು. ಹಾಗಾಗಿ ಈ ಸುಳ್ಳು ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು. ಮಾಜಿ ಸಚಿವ ರಮೇಶ ಜಾರಕಿಹೊಳಿ ಲೈಂಗಿಕ ಹಗರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು ನನ್ನ ಸ್ನೇಹಿತ ಅರುಣ್ ಅವರನ್ನು ಅಕ್ರಮವಾಗಿ ಬಂಧಿಸಿ, ನನ್ನ ಮತ್ತು ಪತ್ನಿಗೆ ಸಂಬAಧಿಸಿದ ಅಶ್ಲೀಲ ವಿಡಿಯೊಗಳನ್ನು ಮುನಿರತ್ನ ಅವರಿಗೆ ನೀಡುವಂತೆ ಒತ್ತಾಯಿಸಿದ್ದರು. ಇಲ್ಲವಾದರೆ ಈ ಹಗರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಮಂಜುಳಾ ಅವರ ಪತಿ ನಾರಾಯಣಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಸಾಲು ಸಾಲು ಎಫ್‌ಐಆರ್‌ಗಳ ಹಿನ್ನೆಲೆಯಲ್ಲಿ ನ.೩೦ರಂದು ಮಾಜಿ ಕಾರ್ಪೋರೇಟ್ ಮಂಜುಳಾ ಎಂಬುವರ ಪತಿ ನಾರಾಯಣಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಮಾನಹಾನಿ, ಕೊಲೆಗೆ ಸಂಚು ರೂಪಿಸಿರುವ ಆರೋಪದಡಿ ದಾಖಲಾಗಿರುವ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಗಳು ಮೇಲ್ನೋಟಕ್ಕೆ ಸಾಭೀತಾದರೆ ಮತ್ತೆ ಮುನಿರತ್ನರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಾರ್ಜ್ಶೀಟ್ ಬೆನ್ನಲ್ಲೇ ಪ್ರಕರಣ:
ನಗರದ ವೈಯಲಿಕಾವಲ್ ಪೊಲೀಸ್ ಠಾಣೆಯಲ್ಲಿ ಸೆಪ್ಟಂಬರ್ 13 ರಂದು ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು 82 ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 53 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ 590 ಪುಟಗಳ ಚಾರ್ಜ್ಶೀಟ್ ಸಲ್ಲಿಸಿರುವ ಬೆನ್ನಲ್ಲೇ ಕೊಲೆಗೆ ಸುಪಾರಿ ಸೇರಿದಂತೆ ವಿವಿಧ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ನ.30 ರಂದು ದಾಖಲಾಗಿರುವ ಪ್ರಕರಣ ಸೇರಿ ಈವರೆಗೆ ಒಟ್ಟು 4 ಎಫ್‌ಐಆರ್‌ಗಳು ಶಾಸಕ ಮುನಿರತ್ನ ವಿರುದ್ಧ ದಾಖಲಾಗಿವೆ. ಆ ಪೈಕಿ ಒಂದು ಪ್ರಕರಣದಲ್ಲಿ ಮಾತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.