ಬೆಳಗಾವಿ : ಇತ್ತಿಚ್ಚಿನ ದಿನಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿರುವುದರಿಂದ ಪೊಲೀಸರು ದಂಗಾಗಿದ್ದಾರೆ.ಈ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಮಾಳಮಾರುತಿ ಪೊಲೀಸರು ಹೋಮ ಹವನದ ಮೊರೆ ಹೋಗಿದ್ದಾರೆ.

ಕಳೆದ ವಾರ ಮಹಿಳೆಯೊಬ್ಬಳ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ ಅಮಾನವೀಯ ಘಟನೆ ನಡೆದಿತ್ತು. ಮೊನ್ನೆ ಇದೇ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿಗಾಗಿ ಗುಂಡಿನ ಸದ್ದು ಕೇಳಿ ಬಂದಿತ್ತು. ಕೊಲೆ ಸುಲಿಗೆ, ದರೋಡೆ, ಕಳ್ಳತನ ಸೇರಿ ಸುಮಾರು 45ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು .ಕ್ರೈಂ ಕಂಟ್ರೋಲ್ ಗೆ ಸಾಕಷ್ಟು ಪ್ರಯತ್ನ ಮಾಡಿದ್ರೂ ಪ್ರಯೋಜನ ಆಗದ ಹಿನ್ನೆಲೆ. ಕಳೆದ ಒಂದೂವರೆ ತಿಂಗಳಲ್ಲಿ ಅತೀ ಹೆಚ್ಚು ಅಪರಾಧ ಕೃತ್ಯ ನಡೆದಿರುವ ಠಾಣೆ ಇದಾದ ಕಾರಣ ಅಪರಾಧ ಕೃತ್ಯಗಳು ಕಡಿಮೆ ಆಗಲಿ ಅಂತಾ ಹೋಮ ಹವನದ ಮೊರೆ ಹೋಗಿದ್ದಾರೆ.
ಠಾಣಾಧಿಕಾರಿ ಖಾಲಿಮಿರ್ಚಿ ನೇತೃತ್ವದಲ್ಲಿ ಠಾಣೆ ಬಾಗಿಲಿಗೆ ಬುದಗುಂಬಳಕಾಯಿ ಒಡೆದು ಅರಿಶಿನ ಕುಂಕುಮ ಹಚ್ಚಿ ಹೋಮ ಹವನ ಮಾಡಿ ವಿಶೇಷ ಪೂಜೆ ಪೂಜೆ ಸಲ್ಲಿಸಿದ್ದಾರೆ.ಒಟ್ಟಿನಲ್ಲಿ ಪೊಲೀಸರು ನೆಮ್ಮದಿಗಾಗಿ ದೇವರ ಮೊರೆ ಹೋಗಿದ್ದು ಪೊಲೀಸರೇ ಮೂಢನಂಬಿಕೆ, ಮೌಡ್ಯಕ್ಕೆ ಶರಣಾಗಿದ್ದು ಎಂದು ಪರ ವಿರೋಧ ಚರ್ಚೆ ಶುರುವಾಗಿದೆ.