ಮೈಸೂರು : ಮನುಷ್ಯರು ಕಾಡನ್ನು ಆಕ್ರಮಿಸಿದರೆ ,ಈ ಕ್ರೂರ ಪ್ರಾಣಿಗಳು ನಾಡನ್ನು ಆಕ್ರಮಿಸುವ ಸಮಯ ಬಂದಿದೆ . ಚಿರತೆ ,ಕಾಡಾನೆ ಹಿಂಡು, ನಾಡಿಗೆ ಬರುತಿತ್ತು ಈಗ ಮೈಸೂರು ನಗರಕ್ಕೀಗ ಹುಲಿಗಳ ಕಾಟ ಎದುರಾಗುವ ಆತಂಕ ಶುರುವಾಗಿದೆ.ನಗರ ಹೊರವಲಯದಲ್ಲಿರುವ ಹೊಸ ಬಡಾವಣೆಗಳಲ್ಲಿನ ಪೊದೆಗಳು, ಗ್ರಾಮಾಂತರದ ಪಾಳು ಜಮೀನು, ಬೆಟ್ಟ ಗುಡ್ಡಗಳಲ್ಲಿ ಇವು ಆಶ್ರಯ ಪಡೆದಿವೆ. ಈಗ ಚಿರತೆಗಳ ಜೊತೆ ಹುಲಿಗಳೂ ಸೇರಿಕೊಂಡಿರುವುದರಿAದ ಆತಂಕ ಇಮ್ಮಡಿಯಾಗಿದೆ. ಹುಲಿಗಳ ಸಂಚಾರದ ಆತಂಕದಿAದ ರಾತ್ರಿ ವೇಳೆ ನಗರದ ಹೊರ ವಲಯದಲ್ಲಿ ಸಂಚರಿಸುವುದು ಕಷ್ಟ ಸಾಧ್ಯವಾಗುತ್ತಿದೆ.
ಮೈಸೂರಿನ ಬೆಟ್ಟದಲ್ಲಿ ಅಂತೂ ಚಿರತೆಗಳ ಹಾವಳಿ ಇದೆ ಆದರೆ ನಗರ ಹೊರವಲಯದ ಕೈಗಾರಿಕಾ ಪ್ರದೇಶ ಮತ್ತು ಹಲವು ಗ್ರಾಮಗಳ ಹೊರ ಬಯಲಿನಲ್ಲಿ ಮರ್ನಾಲ್ಕು ಹುಲಿಗಳು ಸುತ್ತಾಡುತ್ತಿರುವುದು ಖಚಿತಗೊಂಡಿದ್ದು ಜನತೆ ಗಾಬರಿಯಾಗಿದ್ದಾರೆ. ಸಾಧಾರಣವಾಗಿ ನಾಗರಹೊಳೆ ಬಂಡೀಪುರದAತಹ ದಟ್ಟಾರಣ್ಯಗಳು ಹುಲಿಗಳ ತಾಣ.ಆದರೆ ಈ ಹುಲಿಗಳು ಅರಣ್ಯದಿಂದ ಸುಮಾರು ೬೦ ಕಿಲೋಮೀಟರ್ಗೂ ಹೆಚ್ಚು ದೂರ ಕ್ರಮಿಸಿ ನಗರ ಹೊರವಲಯ ಹಾಗು ಗ್ರಾಮಾಂತರದ ಜನವಸತಿಗಳತ್ತ ಬಂದಿರುವುದು ಆತಂಕ ಮೂಡಿಸಿದೆ.
ಸಾಧಾರಣವಾಗಿ ವಯಸ್ಸಾದ ಮತ್ತು ದೊಡ್ಡಗಾಯಗಳಿಂದ ಬೇಟೆಯಾಡಲು ಶಕ್ತಿಯಿಲ್ಲದ ರೋಗಿಷ್ಟ ಹುಲಿಗಳಷ್ಟೇ ಕಾಡುಗಡಿಯಲ್ಲಿ ಸಾಕುಪ್ರಾಣಿಗಳನ್ನು ಬೇಟೆಯಾಡುತ್ತವೆ. ಆದರೆ ಚಿಕ್ಕ ವಯಸ್ಸಿನ ಈ ಹುಲಿಗಳು ಕಾಡಿನ ಗಡಿಯನ್ನೂ ಬಿಟ್ಟು ನೇರವಾಗಿ ನಾಡಿನತ್ತಲೇ ಬಂದಿರುವುದು ಪ್ರಾಣಿ ತಜ್ಞರಲ್ಲಿ ಅಚ್ಚರಿ ಮೂಡಿಸಿದೆ.ಈಗ ನಗರ ಹೊರವಲಯದಲ್ಲಿ ಓಡಾಡುತ್ತಿರುವ ಈ ವ್ಯಾಘ್ರಗಳ ಚಿತ್ರ ಗಮನಿಸಿದರೆ ಇವು ಬಹಳ ಚಿಕ್ಕ ವಯಸ್ಸಿನ ಹುರುಪಿನ ಹುಲಿಗಳು ಎನ್ನುವುದು ಖಚಿತವಾಗುತ್ತಿದೆ.
ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಹುಲಿಗಳೀಗ ಚಿಕ್ಕಕಾನ್ಯ, ದೊಡ್ಡಕಾನ್ಯ, ಬ್ಯಾತಹಳ್ಳಿ ಹಾಗೂ ಸಿಂಧುವಳ್ಳಿ ಭಾಗಗಳಲ್ಲಿ ಸಂಚರಿಸುತ್ತಿರುವ ಮಾಹಿತಿಯಿದ್ದು ಇಲ್ಲಿ ಅರಣ್ಯ ಇಲಾಖೆ ಬೋನುಗಳ ಮೂಲಕ ಹುಲಿಗಳ ಸೆರೆಗೆ ಮುಂದಾಗಿದೆ. ಇದಕ್ಕಾಗಿ ಹಲವು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಜಾಡು ಪತ್ತೆಮಾಡಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಗ್ರಾಮವಸತಿಗಳ ಹೊರ ಭಾಗದಲ್ಲಿ ಕಾಡು ಹಂದಿಗಳ ಸಂತತಿ ಹೆಚ್ಚಿರುವುದು ಮತ್ತು ಇವುಗಳನ್ನು ಬೇಟೆಯಾಡುವುದು ಹುಲಿಗಳಿಗೆ ಸುಲಭವಾಗಿರುವುದರಿಂದ ಇವು ಜನವಸತಿಗೆ ಹತ್ತಿರದಲ್ಲಿ ಓಡಾಡಲು ಮತ್ತೊಂದು ಕಾರಣವಿರಬಹುದು ಎಂಬ ಶAಕೆಯೂ ಈಗ ಶುರುವಾಗಿದೆ. ಕಳೆದ ಕೆಲ ದಿನದ ಹಿಂದೆ ನಂಜನಗೂಡು ತಾಲ್ಲೂಕು ಹೆಡಿಯಾಲ ಭಾಗದ ಕಾಡಿನಲ್ಲಿ ಹುಲಿಯೊಂದು ಮಹಿಳೆಯೊಬ್ಬರನ್ನು ಬಲಿ ಪಡೆದಿತ್ತು. ಅದನ್ನೀಗ ಬಹಳ ಕಷ್ಟದಿಂದ ಸೆರೆ ಹಿಡಿಯಲಾಗಿದೆ. ಜಿಲ್ಲೆಯಲ್ಲಿ ಕೆಲವೇ ವಾರಗಳ ಅಂತರದಲ್ಲಿ ಮೂವರು ಹುಲಿಗೆ ಬಲಿಯಾಗಿದ್ದಾರೆ. ಈ ಮೂವರ ದೇಹದ ಭಾಗಗಳನ್ನು ಹುಲಿಗಳು ತಿಂದುಹಾಕಿದ್ದವು. ಇAತಹ ಹುಲಿಗಳೀಗ ಅರಣ್ಯ ಬಿಟ್ಟು, ಗ್ರಾಮಾಂತರ ಜನವಸತಿ ಹಾಗು ನಗರ ಹೊರವಲಯದಲ್ಲಿಯೂ ಕಾಣಸಿಗುತ್ತಿವೆ. ಹೀಗಾಗಿ ಇವು ಸುಲಭವಾಗಿ ಸಿಗುವ ಸಾಕು ಪ್ರಾಣಿಗಳು ಮತ್ತು ಮನುಷ್ಯರ ಬೇಟೆಗೆ ಇಳಿಯಲಿವೆಯೇ ಎಂಬ ಆತಂಕ ತಲೆ ಹಾಕಿದೆ.


