ಬೆಂಗಳೂರು ; 40% ಬಿಜೆಪಿ ಸರಕಾರದ ವಿರುದ್ಧ ದೂರು ನಿಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನೇತೃತ್ವದ ಈಗಿನ ಸರ್ಕಾರದಲ್ಲೂ ಜಲ ಸಂಪನ್ಮೂಲ ಮತ್ತು ನಗರಾಭಿವೃದ್ಧಿ ಇಲಾಖೆಗಳು ಹಾಗೂ ಬಿಬಿಎಂಪಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರು, ಕೆಲವು ದಾಖಲೆಗಳೊಂದಿಗೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಯೋಗಕ್ಕೆ ದೂರು ನೀಡಿದ್ದಾರೆ.
ಸರಕಾರದಲ್ಲಿ ಭ್ರಷ್ಟಾಚಾರ ಸಹಜ ,ಅದರಲ್ಲೂ ಕಾಂಗ್ರೆಸ್ ಸರಕಾರಕಂತೂ ಮೊದಲಿನಿಂದಲೂ ಇವರಿಗೆ ಎಲ್ಲಿ ಏನಿದೆ ಎಂಬುದು ತಿಳಿದ ವಿಚಾರ. ‘ಜಲ ಸಂಪನ್ಮೂಲ ಮತ್ತು ನಗರಾಭಿವೃದ್ಧಿ ಇಲಾಖೆಗಳಲ್ಲಿ ಕೆಲವು ಅಧಿಕಾರಿಗಳು ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಡುತ್ತಿರುವ ಕುರಿತು ಕೆಂಪಣ್ಣ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಿಬಿಎಂಪಿಯ ಕೆಲವು ಅಧಿಕಾರಿಗಳು ಸಚಿವರ ಹೆಸರಿನಲ್ಲೇ ಹಣಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆಯೂ ದೂರಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಬಾಕಿ ಬಿಲ್ ಪಾವತಿಯಲ್ಲಿ ಜ್ಯೇಷ್ಠತೆ ಉಲ್ಲಂಘನೆ, ಹೆಚ್ಚು ಕಮಿಷನ್ ನೀಡಿದವರಿಗೆ ಬಿಲ್ ಪಾವತಿ, ದುರುದ್ದೇಶದಿಂದ ಕಾಮಗಾರಿಗಳಿಗೆ ತಡೆ ನೀಡಿರುವುದು, ಕೆಲಸ ಮುಂದುವರಿಸುವುದಕ್ಕೂ ಕಮಿಷನ್ಗೆ ಬೇಡಿಕೆ ಇಟ್ಟಿರುವುದು ಸೇರಿದಂತೆ ಹಲವು ಆರೋಪಗಳು ದೂರಿನಲ್ಲಿವೆ ಎಂಬ ಮಾಹಿತಿ ಲಭಿಸಿದೆ.
ಈ ಕುರಿತು ಮಾಧ್ಯಮದ ಜತೆ ಮಾತನಾಡಿದ ಕೆಂಪಣ್ಣ, ‘ಕೆಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿಲ್ಲ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿತ್ತು. ಹೆಚ್ಚು ಭ್ರಷ್ಟಾಚಾರ ಇರುವ ಕೆಲವು ಇಲಾಖೆಗಳ ಕುರಿತು ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಮಾಹಿತಿ ನೀಡಿದ್ದೇವೆ. ಹಿಂದೆ ನಡೆದಿರುವ ಭ್ರಷ್ಟಾಚಾರದ ತನಿಖೆಯ ಜತೆಯಲ್ಲೇ ಈಗ ನಡೆಯುತ್ತಿರುವ ಅಕ್ರಮಗಳನ್ನೂ ನಿಯಂತ್ರಿಸುವಂತೆ ಆಯೋಗಕ್ಕೆ ಮನವಿ ಮಾಡಿದ್ದೇವೆ’ ಎಂದರು.


