ಬೆಂಗಳೂರು: ಆಪರೇಷನ್ ಹಸ್ತ ಅಬಾಧಿತವಾಗಿ ಮುಂದುವರಿದಿದೆ. 2024 ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್ ಲಿAಗಾಯತ ಸಮುದಾಯದ ಪ್ರಭಾವಿ ನಾಯಕ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ವಿ.ಸೋಮಣ್ಣ ಅವರಿಗೆ ಗಾಳ ಹಾಕಿದ್ದು ಪಕ್ಷಕ್ಕೆ ಕರೆತರಲು ವೇದಿಕೆ ಸಜ್ಜಾಗಿದೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರೇ ಇದಕ್ಕೆ ಪೌರೋಹಿತ್ಯ ವಹಿಸಿರುವುದು ವಿಶೇಷವಾಗಿದೆ.
ಬಿಜೆಪಿಯಿಂದ ಹಲವು ಮುಖಂಡರು ಕಾAಗ್ರೆಸ್ಗೆ ಬರಲಿದ್ದಾರೆ ಎನ್ನುವ ಕೈ ಮುಖಂಡರು ಹೇಳಿಕೆಗೆ ಪುಷ್ಠಿ ಎಂಬAತೆ ಇದೀಗ ಪ್ರಭಾವಿ ನಾಯಕರಿಗೇ ಗಾಳ ಹಾಕಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭವೇ ಕಾAಗ್ರೆಸ್ ಅಭ್ಯರ್ಥಿಯಾಗಲಿದ್ದಾರೆಂಬ ವದAತಿ ಇತ್ತಾದರೂ ಖುದ್ದು ಕೇಂದ್ರ ಗೃಹಸಚಿವರೇ ಸೋಮಣ್ಣ ಅವರ ನಿವಾಸಕ್ಕೆ ಭೇಟಿ ಕೊಟ್ಟು ಮನವೊಲಿಸಿದ್ದರು. ಬಳಿಕ ವರುಣಾ ಮತ್ತು ಚಾಮರಾಜನಗರದಿಂದ ಸ್ಪರ್ಧಿಸಿ ಎರಡೂ ಕಡೆ ಪರಾಭವಗೊಂಡಿದ್ದರು.
ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಅಪೇಕ್ಷೆ ವ್ಯಕ್ತಪಡಿಸಿದ್ದರೂ ವಂಚಿತರಾಗಿದ್ದರು. ಹೈಕಮಾAಡ್ ಗ್ರೀನ್ಸಿಗ್ನಲ್ ಸೋಮಣ್ಣ ಅವರ ಅಸಮಾಧಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವಲ್ಲಿ ಕೈ ಪಾಳೆಯ ಸಕ್ಸೆಸ್ ಕಂಡಿದೆ. ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರೇ ಹಲವು ಸುತ್ತಿನ ಮಾತುಕತೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೂ ಮಾತನಾಡಿಸಿದ್ದಾರೆ ಎನ್ನಲಾಗಿದೆ.
ತೆರೆಮರೆಯಲ್ಲಿಯೇ ಇವೆಲ್ಲವೂ ನಡೆದಿದ್ದು ಸೋಮಣ್ಣ ಕೈ ಹಿಡಿಯುವುದು ಬಹುತೇಕ ಖಚಿತವಾಗಿದೆ. ತುಮಕೂರು ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಗೆ ಹುಡುಕಾಟ ನಡೆಸುತ್ತಿದ್ದ ಕಾಂಗ್ರೆಸ್ ಇದೀಗ ಸೋಮಣ್ಣ ಅವರ ಮೂಲಕ ಅದನ್ನು ಸಾಧಿಸಿಕೊಳ್ಳಲು ನಿರ್ಧರಿಸಿದೆ.
ಹೈಕಮಾಂಡ್ ಕೂಡಾ ಇದಕ್ಕೆ ಹಸಿರುನಿಶಾನೆ ತೋರಿಸಿದೆ ಎನ್ನಲಾಗಿದೆ. ಪ್ರಭಾವ ಬಳಸಿಕೊಳ್ಳಲು ಪ್ರಯತ್ನ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದು ಸಿದ್ದಗಂಗೆ ಸೇರಿದಂತೆ ವಿವಿಧ ಮಠಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಹಳೆ ಮೈಸೂರು ಭಾಗದಲ್ಲಿಯೂ ಕಾಂಗ್ರೆಸ್ಗೆ ಪ್ಲಸ್ಪಾಯಿAಟ್ ಆಗಲಿದೆ ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅಲ್ಲದೆ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸೋಮಣ್ಣ ಅವರ ಶಕ್ತಿಯ ಅರಿವಿದ್ದು, ಈ ಹಿಂದೆ ಕೈ ಸೇರ್ಪಡೆಗೆ ವಿರೋಧಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಓಕೆ ಎಂದಿದ್ದಾರೆ.
ಸೋಮಣ್ಣ ಕೈ ಸೇರ್ಪಡೆ ಬಹುತೇಕ ಅಂತಿ ಮವಾಗಿದ್ದು ಡಿ.6ರಂದು ಸಿದ್ದಗಂಗೆಯಲ್ಲಿ ನಡೆಯುವ ಸಮಾರಂಭದಲ್ಲೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ನಿಚ್ಚಳವಾಗಿದೆ.


