ಕುರುಗೋಡು : ಸಮೀಪದ ಎಮ್ಮಿಗನೂರಿನ ಶ್ರೀ ಜಡೇಶಿದ್ದೇಶ್ವರ ಹಳ್ಳದ ದಡದಲ್ಲಿ ಮೊಸಳೆ ಇಂದು ಕಂಡು ಬಂದಿದ್ದು ಜನತೆ ಆತಂಕವಾಗಿದ್ದಾರೆ ಈ ಮೊಸಳೆ 10 ರಿಂದ 12 ಅಡಿ ಉದ್ದವಾಗಿದ್ದು, ಕೂಲಿ ಕಾರ್ಮಿಕರು ಹಳ್ಳದ ದಾಟಲು ಆತಂಕಗೊಂಡಿದ್ದಾರೆ. ಒಂದೇ ದಿವಸ ಹಳ್ಳದಲ್ಲಿ ಹಲವು ಕಡೆ ಕಂಡು ಬಂದಿದೆ. ಪ್ರಕಾರ ಮೊಸಳೆ ಮರಿಹಾಕಿದೆ ಎನ್ನಲಾಗಿದೆ. ಅರಣ್ಯ ಅಧಿ ಕಾರಿಗಳು ಮೊಸಳೆ ಹಿಡಿಯಲು ಮುಂದಾಗಬೇಕಿದೆ ಎಂದು ಸರ್ವಜನಿಕರು ಒತ್ತಾಯಿಸಿದ್ದಾರೆ.
ಮೊಸಳೆ ಕಂಡು ಬಂದರೂ ಅರಣ್ಯ ಅಧಿಕಾರಿಗಳು ಹಿಡಿಯಲು ಕ್ರಮ ಮಾಡದೆ ನಿರ್ಲಕ್ಷ್ಯವಹಿದ್ದಾರೆ ಎಂದು ರೈತರು ಸರ್ವಜನಿಕರು ದೂರಿದ್ದಾರೆ. ಈ ಕೂಡಲೇ ಗ್ರಾಪಂ ಆಧಿಕಾರಿ ಆಡಳಿತ ಎಚ್ಚೆತ್ತು ಜಾನುವಾರು ಹಾಗೂ ಜನತೆಗಳು ರಕ್ಷಣೆ ಮುಂದಾಗಬೇಕಿದೆ. ಮೊಸಳೆ ನೋಡಲು ಶಾಲೆ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಮಕ್ಕಳು ಕೂತಹಲ ದಿಂದ ವಿಕ್ಷಿಸಿದರು.


