Monday, March 16, 2026
Flats for sale
Homeಜಿಲ್ಲೆಕಡಬ : ಸುಳ್ಯ ಕ್ಷೇತ್ರದ ಕಾಂಗ್ರೆಸ್ ಸೋಲಿನ ಪರಾಮರ್ಶೆ ಸಭೆ.ಉಭಯ ಬಣಗಳ ಮಧ್ಯೆ ಮಾರಾಮಾರಿ.

ಕಡಬ : ಸುಳ್ಯ ಕ್ಷೇತ್ರದ ಕಾಂಗ್ರೆಸ್ ಸೋಲಿನ ಪರಾಮರ್ಶೆ ಸಭೆ.ಉಭಯ ಬಣಗಳ ಮಧ್ಯೆ ಮಾರಾಮಾರಿ.

ಕಡಬ : ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕೃಷ್ಣಪ್ಪ ಜಿ. ಹಾಗೂ ನಂದಕುಮಾರ್ ಬಣದ ನಡುವೆ ಮಾರಾಮಾರಿ ,ಕಡಬದ ಅಂಬೇಡ್ಕರ್ ಭವನದಲ್ಲಿ ಘಟನೆ ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಸಮಿತಿಯ ಮುಖಂಡರು ಆಗಮಿಸಿದ್ದರು.

ಉಚ್ವಾಟಿತ ಮುಖಂಡರು ಆಗಮಿಸಿದ್ದು ಕೃಷ್ಣಪ್ಪ ಜಿ. ಬಣದವರ ಆಕ್ರೋಶಕ್ಕೆ ಕಾರಣ ಕೃಷ್ಣಪ್ಪ ಅವರೇ ಉಚ್ವಾಟಿತ ಸದಸ್ಯರಿಗೆ ನೀವು ಈ ಸಭೆಗೆ ಯಾಕೆ ಬಂದಿದ್ದಿರಿ ಎಂದು ಪ್ರಶ್ನೆ ನಿಮಗೆ ಮಾನ ಮರ್ಯಾದಿ ಇಲ್ಲವೇ ಎಂದು ರೇಗಿಸಿದ ಕೃಷ್ಣಪ್ಪ ಕಡಬದಲ್ಲಿ ಕಾಂಗ್ರೆಸ್ ಬಲಪಡಿಸಿದ ನಮ್ಮನ್ನು ಪ್ರಶ್ನಿಸುವ ಹಕ್ಕು, ಎಲ್ಲಿಂದಲೋ ಬಂದ ನಿಮಗೆ ಯಾರು ಕೊಟ್ಟದ್ದು ಎಂದು ಉಭಯ ತಂಡದ ಪ್ರಶ್ನೆ.

ಮಾತಿನ ಚಕಮಕಿ ನೂಕಾಟ, ತಳ್ಳಾಟ, ಹಲ್ಲೆ ಪೋಲಿಸರ ಮಧ್ಯಪ್ರವೇಶದ ಬಳಿಕ ತಣ್ಣಗಾದ ಘಟನೆ ಕೃಷ್ಣಪ್ಪ ಬಣದ ಮುಖಂಡರು ನಂದಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿದಂತೆ ನಾಲ್ಕು ಮಂದಿಯ ಮೇಲೆ ಹಲ್ಲೆ ನಡೆಸಿದ ಆರೋಪ ಸಾಮಾಜಿಕ ಜಾಲತಾಣದಲ್ಲಿ ಮಾರಾಮಾರಿ ನಡೆದಿರುವ ವೀಡಿಯೋಗಳು ವೈರಲ್.

ಸೋಲಿನ ಪರಾಮರ್ಶೆ ಸಭೆಯು ರಣಾಂಗಣವಾದ ಸನ್ನಿವೇಶದಲ್ಲಿ,ನಂದಕುಮಾರ್ ಬಣದ ಸಾಮಾಜಿಕ ತಾಣ ನಿರ್ವಹಣೆ ಮಾಡಿದ ಮುಖಂಡನನ್ನು ಎಳೆದಾಡಿಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular