Tuesday, September 29, 2026
Homeಜಿಲ್ಲೆಮಂಗಳೂರು : ಕೋರ್ಟ್ ತೆರಳುತ್ತಿದ್ದ ಜಡ್ಜ್ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ ; ಆಟೋ ಚಾಲಕ...

ಮಂಗಳೂರು : ಕೋರ್ಟ್ ತೆರಳುತ್ತಿದ್ದ ಜಡ್ಜ್ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ ; ಆಟೋ ಚಾಲಕ ಸಾವು, ಸ್ಕೂಟರ್ ಸವಾರನಿಗೆ ಗಂಭೀರ ಗಾಯ.

ಮಂಗಳೂರು : ನಗರದ ಕೋರ್ಟ್ ಕ್ರಾಸ್ ರಸ್ತೆಯ ರಾಧಾ ಮೆಡಿಕಲ್ಸ್ ಸಮೀಪ ಕಾರು, ಗೂಡ್ಸ್ ಆಟೋರಿಕ್ಷಾ ಹಾಗೂ ಸ್ಕೂಟರ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಗೂಡ್ಸ್ ಆಟೋ ಚಾಲಕ ಚಂದ್ರ (67) ಮೃತಪಟ್ಟಿದ್ದಾರೆ. ಸ್ಕೂಟರ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಕಾರಿನಲ್ಲಿದ್ದ ಜಡ್ಜ್ ವಿನಯ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕೋರ್ಟ್ ಕಡೆಗೆ ತೆರಳುತ್ತಿದ್ದ ಜಡ್ಜ್ ವಿನಯ್ ಅವರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದಿದ್ದು, ಬಳಿಕ ನಿಯಂತ್ರಣ ತಪ್ಪಿದ ಆಟೋ ಸಮೀಪದಲ್ಲಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಇಳಿಜಾರು ರಸ್ತೆಯಲ್ಲಿ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಬಂದ ಗೂಡ್ಸ್ ಆಟೋ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲಬದಿಗೆ ನುಗ್ಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಆಟೋ ಪಲ್ಟಿಯಾಗಿ, ಸಮೀಪದಲ್ಲಿದ್ದ ಸ್ಕೂಟರ್‌ಗೂ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಆಟೋ ಚಾಲಕ ಚಂದ್ರ (67) ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಕೂಟರ್ ಸವಾರನಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಲ್ಲಿ ಕಾರು, ಗೂಡ್ಸ್ ಆಟೋರಿಕ್ಷಾ ಹಾಗೂ ಸ್ಕೂಟರ್‌ಗೆ ಹಾನಿಯಾಗಿದೆ. ಅಪಘಾತಕ್ಕೆ ಸಂಬಂಧಿಸಿ ಮಂಗಳೂರು ಟ್ರಾಫಿಕ್ ಈಸ್ಟ್ (ಕದ್ರಿ ಸಂಚಾರಿ) ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 130/2026ರಡಿ ಪ್ರಕರಣ ದಾಖಲಾಗಿದೆ.

BNS ಸೆಕ್ಷನ್ 281, 125(a), 125(b) ಹಾಗೂ IMV Act ಸೆಕ್ಷನ್ 184ರಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular