Thursday, September 10, 2026
Homeಜಿಲ್ಲೆಮಂಗಳೂರು : 18ನೇ ವರ್ಷದ ಗಣೇಶೋತ್ಸವದ ಸಂಭ್ರಮದಲ್ಲಿ ಜಪ್ಪಿನಮೊಗರು : ಅದ್ದೂರಿ ಕಾರ್ಯಕ್ರಮಗಳ ಆಯೋಜನೆ.

ಮಂಗಳೂರು : 18ನೇ ವರ್ಷದ ಗಣೇಶೋತ್ಸವದ ಸಂಭ್ರಮದಲ್ಲಿ ಜಪ್ಪಿನಮೊಗರು : ಅದ್ದೂರಿ ಕಾರ್ಯಕ್ರಮಗಳ ಆಯೋಜನೆ.

ಮಂಗಳೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಜಪ್ಪಿನಮೊಗರು, ಮಂಗಳೂರು ಇದರ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 13ರಿಂದ 15ರವರೆಗೆ ಊರ ಹಾಗೂ ಪರಊರ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಅಧ್ಯಕ್ಷ ಜೆ. ನಾಗೇಂದ್ರ ಕುಮಾರ್ ರವರು ತಿಳಿಸಿದ್ದಾರೆ.

ಸೆ.13: ಮೆರವಣಿಗೆ, ಉದ್ಘಾಟನೆ ಮತ್ತು ‘ಯಕ್ಷ ತೆಲಿಕೆ’

ಸೆ.13ರಂದು ಸಂಜೆ 4 ಗಂಟೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಜಪ್ಪಿನಮೊಗರು ಶ್ರೀ ವೈದ್ಯನಾಥ ಮಹಾದ್ವಾರದಿಂದ ಶ್ರೀ ವಿಶ್ವೇಶ್ವರನ ವಿಗ್ರಹ ಹಾಗೂ ಭಕ್ತರಿಂದ ಸಮರ್ಪಿಸಲಾದ ವಿವಿಧ ಹರಕೆ ಸಾಮಗ್ರಿಗಳನ್ನು ಗಣೇಶ ಮಂಟಪಕ್ಕೆ ತರಲಾಗುವುದು.
ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಭೆ ನಡೆಯಲಿದ್ದು, ಶ್ರೀಮತಿ ಮಲ್ಲಿಕಾ ಹಾಗೂ ನಿವೃತ್ತ ಸೈನಿಕರಾದ ಶ್ರೀ ಸೀತಾರಾಮ್ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಡಾ. ಅಣ್ಣಯ್ಯ ಕುಲಾಲ್ ಉಳ್ಳೂರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಎಂ.ಎನ್. ರಾಜೇಂದ್ರ ಕುಮಾರ್, ಕೆ.ಎಂ. ಅಶ್ರಫ್, ಪಿ.ವಿ. ಮೋಹನ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ರಾತ್ರಿ 8 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ‘ಕುಸಾಲ್ಡ್ ಗುರಿಕಾರೆ’ ದಿನೇಶ್ ಕೊಡಪದವು ಅವರ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಸಮಾಗಮದೊಂದಿಗೆ ‘ಯಕ್ಷ ತೆಲಿಕೆ’ ಯಕ್ಷ ಹಾಸ್ಯ ವೈಭವ ನಡೆಯಲಿದೆ.

ಸೆ.14: ಗಣಪತಿ ಪ್ರತಿಷ್ಠಾಪನೆ, ಯಕ್ಷಗಾನ ಮತ್ತು ಸಂಗೀತ ಗಾನ ಸಂಭ್ರಮ.

ಸೆ.14ರಂದು ಬೆಳಿಗ್ಗೆ 7 ಗಂಟೆಗೆ ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿಗಳ ಪೌರೋಹಿತ್ಯದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾಪನೆ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಪ್ರತಿಷ್ಠಾಪನಾ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಶ್ರೀ ಕೃಷ್ಣ ಜೆ. ಪಾಲೆಮಾರ್ ಉದ್ಘಾಟಿಸಲಿದ್ದು, ಶ್ರೀ ಸದಾಶಿವ ಉಳ್ಳಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಅಲ್‌ಹಜ್ ಯೆನಪೋಯ ಅಬ್ದುಲ್ಲಾ ಕುಂಣಿ, ಶ್ರೀ ದಿನೇಶ್ ಆಳ್ವ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಹಸಿರು ತೆನೆ ವಿತರಣೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಶ್ರೀ ಜಯಕರ್ ಪಂಡಿತ್ ಬಜಾಲ್ ನಿರ್ದೇಶನದಲ್ಲಿ ಶ್ರೀ ಮುಕಾಂಬಿಕ ಯಕ್ಷಗಾನ ತರಬೇತಿ ಕೇಂದ್ರ, ಮಂಗಳಾದೇವಿಯ ಕಲಾವಿದರಿಂದ ‘ಸಿರಿ ಕೃಷ್ಣ ಚಂದಪಾಲಿ’ ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ಶ್ರೀ ಯು.ಟಿ. ಖಾದರ್ ಫರೀದ್ ಅವರ ಘನ ಉಪಸ್ಥಿತಿಯಲ್ಲಿ ಶ್ರೀ ಸುರೇಂದ್ರ ಕಂಬಳಿ ಅಡ್ಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿ’ಸೋಜಾ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಲ್. ಧರ್ಮ ಹಾಗೂ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಸಂಜೆ 7 ಗಂಟೆಗೆ ಸಾರ್ವಜನಿಕ ರಂಗಪೂಜೆ ಹಾಗೂ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8 ಗಂಟೆಗೆ ಶ್ರೀ ಪುತ್ತೂರು ಜಗದೀಶ್ ಆಚಾರ್ಯ ಅವರ ಸಾರಥ್ಯದಲ್ಲಿ ‘ಸಂಗೀತ ಗಾನ ಸಂಭ್ರಮ’ ಭಕ್ತಿಗೀತೆಗಳ ಸಂಗೀತ ರಸಮಂಜರಿ ನಡೆಯಲಿದೆ.

ಸೆ.15: ಮಹಾಗಣಯಾಗ, ನೃತ್ಯ ನಾಟಕ ಮತ್ತು ಶೋಭಾಯಾತ್ರೆ
ಸೆ.15ರಂದು ಬೆಳಿಗ್ಗೆ 7.30ಕ್ಕೆ 108 ತೆಂಗಿನಕಾಯಿಯ ಮಹಾಗಣಯಾಗ ಆರಂಭವಾಗಲಿದೆ.

ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಪಾಂಚಜನ್ಯ ಪ್ರತಿಷ್ಠಾನ ಕುಡ್ಲದ ಕಲಾವಿದರಿಂದ ‘ಮಂಗಳಾಪುರದ ಮಂಗಳಾಂಬೆ’ ಎಂಬ ಶ್ರೀ ದೇವಿಯ ಭಕ್ತಿ ಪ್ರಧಾನ ಪೌರಾಣಿಕ ನೃತ್ಯ ನಾಟಕ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ, ಮಧ್ಯಾಹ್ನ 2 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

ಸಂಜೆ 3.30ಕ್ಕೆ ಸಮಾರೋಪ ಸಮಾರಂಭದ ಧಾರ್ಮಿಕ ಸಭೆ ನಡೆಯಲಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಡಿ.ವೇದವ್ಯಾಸ ಕಾಮತ್ ಅವರ ಘನ ಉಪಸ್ಥಿತಿಯಲ್ಲಿ ಲ. ದಿನೇಶ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಮಂಜುನಾಥ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ಪ್ರಸಾದ್ ನೇತ್ರಾಲಯದ ಅಧ್ಯಕ್ಷ ಡಾ. ಕೃಷ್ಣಪ್ರಸಾದ್ ಕೂಡ್ಲು, ಶ್ರೀ ಮಿಥುನ್ ಎಂ. ರೈ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಸಂಜೆ 5 ಗಂಟೆಗೆ ವಿವಿಧ ಕುಣಿತ ಭಜನೆ, ಚಂಡೆ ಹಾಗೂ ವಾದ್ಯಗಳೊಂದಿಗೆ ಶ್ರೀ ವಿಶ್ವೇಶ್ವರ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ರಾತ್ರಿ 11 ಗಂಟೆಗೆ ಕಡೆಕಾರ್ ನೇತ್ರಾವತಿ ನದಿ ತೀರದಲ್ಲಿ ಜಲಾಧಿವಾಸ ನಡೆಯಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಸುಧಾಕರ ಜೆ. ಹಾಗೂ ಲ. ಶ್ರೀಧರ್‌ರಾಜ್ ಶೆಟ್ಟಿ, ಉದಯಕುಮಾರ್ ಕೊಟ್ಟಾರಿ, ಲ. ಗಣೇಶ್ ಶೆಟ್ಟಿ ಕಂರ್ಬೆಟ್ಟು, ಬಾಲಕೃಷ್ಣ ಹೆಗ್ಡೆ, ಪ್ರಧಾನ ಕೋಶಾಧಿಕಾರಿ ಶೈಲೇಶ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸುಭಾಶ್ ವಿ. ಅಡಪ್ಪ, ಪ್ರಧಾನ ಸಂಚಾಲಕರಾದ ಜೆ. ಪ್ರಾಣೇಶ್ ರಾವ್ ಹಾಗೂ ಶಿವಾನಂದ ರಾವ್ ಬಜೇಹಿತ್ತಲು, ಸಂಚಾಲಕರಾದ ರಾಜೇಶ್ ಕೊಟ್ಟಾರಿ, ಸುರೇಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular