Wednesday, September 9, 2026
Homeದೇಶನವದೆಹಲಿ : ಮೋದಿ ಹತ್ಯೆಗೆ ಸಂಚು, ಕಾರ್ಯಕ್ರಮಕ್ಕೂ ಮುನ್ನ ಭದ್ರತಾ ಲೋಪ : ನಕಲಿ PMO...

ನವದೆಹಲಿ : ಮೋದಿ ಹತ್ಯೆಗೆ ಸಂಚು, ಕಾರ್ಯಕ್ರಮಕ್ಕೂ ಮುನ್ನ ಭದ್ರತಾ ಲೋಪ : ನಕಲಿ PMO ಐಡಿ, ಬಂದೂಕಿನೊಂದಿಗೆ ಇಬ್ಬರ ಬಂಧನ.

ಮುಂಬೈ : ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಗ್ಲೋಬಲ್ ಫಿನ್‌ಟೆಕ್‌ ಫೆಸ್ಟ್‌ ಕಾರ್ಯಕ್ರಮಕ್ಕೂ ಮುನ್ನ ಮುಂಬೈನ ಬಾಂದ್ರಾ-ಕುರ್‍ಲಾ ಕಾಂಪ್ಲೆಕ್ಸ್‌ನಲ್ಲಿ ಭದ್ರತಾ ಆತಂಕ ಉಂಟಾಗಿದೆ. ನಕಲಿ ಪ್ರಧಾನಿ ಕಚೇರಿ (PMO) ಗುರುತಿನ ಚೀಟಿ ಬಳಸಿ ಜಿಯೋ ವರ್ಲ್ಡ್ ಪ್ಲಾಜಾಗೆ ಪ್ರವೇಶಿಸಲು ಯತ್ನಿಸಿದ ವ್ಯಕ್ತಿ ಹಾಗೂ ಆತನ ಅಂಗರಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್ 7ರಂದು ರೋಹನ್ ಪರೇಖ್ ಎಂಬಾತ PMO ಅಧಿಕಾರಿಯೆಂದು ಹೇಳಿಕೊಂಡು ಜಿಯೋ ವರ್ಲ್ಡ್ ಪ್ಲಾಜಾಗೆ ಪ್ರವೇಶಿಸಲು ಯತ್ನಿಸಿದ್ದಾನೆ. ಬಳಿಕ ಆತನ ಅಂಗರಕ್ಷಕ ದಿಲೀಪ್ ಕುಂಡೆ ಕೂಡ ಸ್ಥಳಕ್ಕೆ ಬಂದಿದ್ದು, ಭದ್ರತಾ ತಪಾಸಣೆ ವೇಳೆ ಆತನ ಬಳಿ ಬಂದೂಕು ಹಾಗೂ ಗುಂಡುಗಳು ಪತ್ತೆಯಾಗಿವೆ.

ಬಂದೂಕು ಪತ್ತೆಯಾದ ಬಳಿಕ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸಿದ್ದು, ರೋಹನ್ ಪರೇಖ್ PMO ಅಧಿಕಾರಿಯೆಂದು ನಮೂದಿಸಿರುವ ಗುರುತಿನ ಚೀಟಿಯನ್ನು ತೋರಿಸಿದ್ದಾನೆ. ಆ ಕಾರ್ಡ್‌ನಲ್ಲಿ ‘ಗ್ರೇಡ್‌ C ಅಧಿಕಾರಿ’ ಎಂದು ನಮೂದಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ದಾಖಲೆಗಳ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ದಿಲೀಪ್ ಕುಂಡೆ ಮಾಜಿ ಸೇನಾ ಸಿಬ್ಬಂದಿಯಾಗಿದ್ದು, ಆತನ ಬಳಿ ಪತ್ತೆಯಾದ ಬಂದೂಕು ಪರವಾನಗಿ ಹೊಂದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದ ಮೂರನೇ ವ್ಯಕ್ತಿ ಪ್ರಥಮೇಶ್ ಬಾಗುಲ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ.
ಈ ಘಟನೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ನೇರವಾಗಿ ಸಂಬಂಧಿಸಿಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಮುಂಬೈ ಕ್ರೈಂ ಬ್ರಾಂಚ್‌ನ ಕ್ರೈಂ ಇಂಟೆಲಿಜೆನ್ಸ್ ಯುನಿಟ್‌ಗೆ ವಹಿಸಲಾಗಿದೆ. ರೋಹನ್ ಪರೇಖ್‌ನನ್ನು ಸೆಪ್ಟೆಂಬರ್ 11ರವರೆಗೆ ಪೊಲೀಸ್ ಕಸ್ಟಡಿಗೆ ಕೋರ್ಟ್ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular