ಮಂಗಳೂರು : ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅಧಿಕಾರಿಗಳ ವರ್ಗಾವಣೆ ಹಾಗೂ ಹೊಸ ಹುದ್ದೆಗಳಿಗೆ ನೇಮಕ ಮಾಡಲಾಗಿದೆ.
ಸಿಐಡಿ ಅಧೀಕ್ಷಕರಾಗಿದ್ದ ಸಮ್ ವರ್ಗೀಸ್, IPS (KN 2022) ಅವರನ್ನು ವರ್ಗಾವಣೆ ಮಾಡಿ ಮಂಗಳೂರು ನಗರ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹುದ್ದೆಗೆ ನೇಮಕ ಮಾಡಲಾಗಿದೆ. ಈ ಹುದ್ದೆ ಸದ್ಯ ಖಾಲಿ ಇತ್ತು.
ಬೆಂಗಳೂರು ಸೌತ್ ವೆಸ್ಟ್ ವಿಭಾಗದ ಡಿಸಿಪಿಯಾಗಿದ್ದ ಅನಿತಾ ಭೀಮಪ್ಪ ಹದ್ದಣ್ಣವರ್, IPS (KN 2014) ಅವರನ್ನು ವರ್ಗಾವಣೆ ಮಾಡಿ ಸಿಐಡಿ ಅಧೀಕ್ಷಕರಾಗಿ ನೇಮಕ ಮಾಡಲಾಗಿದೆ.
ಇನ್ನು, ಹುದ್ದೆ ನಿರೀಕ್ಷೆಯಲ್ಲಿದ್ದ ಡಾ. ರಾಮ್ ಎಲ್. ಅರಸಿದ್ದಿ, IPS (KN 2018) ಅವರನ್ನು ಬೆಂಗಳೂರು ನಗರ ಡಿಸಿಪಿ, ಇಂಟೆಲಿಜೆನ್ಸ್ ಹುದ್ದೆಗೆ ನೇಮಕ ಮಾಡಲಾಗಿದೆ.
ಅದೇ ರೀತಿ ಹುದ್ದೆ ನಿರೀಕ್ಷೆಯಲ್ಲಿದ್ದ ಲಕ್ಷ್ಮಿ ಗಣೇಶ್ ಕೆ., IPS (KN 2020) ಅವರನ್ನು ಬೆಂಗಳೂರು ಸೌತ್ ವೆಸ್ಟ್ ಡಿಸಿಪಿಯಾಗಿ ನೇಮಕ ಮಾಡಲಾಗಿದೆ. ಅವರು ಅನಿತಾ ಭೀಮಪ್ಪ ಹದ್ದಣ್ಣವರ್ ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.
ಹುದ್ದೆಗಳಿಗೆ ಸಮಾನ ಸ್ಥಾನಮಾನ ಸಿಐಡಿ ಅಧೀಕ್ಷಕ, ಬೆಂಗಳೂರು ಸೌತ್ ವೆಸ್ಟ್ ಡಿಸಿಪಿ ಹಾಗೂ ಬೆಂಗಳೂರು ನಗರ ಇಂಟೆಲಿಜೆನ್ಸ್ ಡಿಸಿಪಿ ಹುದ್ದೆಗಳನ್ನು ಐಪಿಎಸ್ (ವೇತನ) ನಿಯಮಗಳು, 2016ರ ನಿಯಮ 12ರ ಅಡಿಯಲ್ಲಿ ಮಂಡ್ಯ ಪೊಲೀಸ್ ಅಧೀಕ್ಷಕರ ಕೇಡರ್ ಹುದ್ದೆಗೆ ಸಮಾನ ಸ್ಥಾನಮಾನ ಮತ್ತು ಜವಾಬ್ದಾರಿಗಳಿರುವ ಹುದ್ದೆಗಳಾಗಿ ಘೋಷಿಸಲಾಗಿದೆ.

