Wednesday, August 19, 2026
Homeಜಿಲ್ಲೆಮಂಗಳೂರು : ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಇಂದು ಮಂಗಳೂರಿನ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ.

ಮಂಗಳೂರು : ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಇಂದು ಮಂಗಳೂರಿನ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ.

ಮಂಗಳೂರು : ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮಂಗಳೂರು ನಗರ ಹಾಗೂ ಉಳ್ಳಾಲ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಕಾವೂರು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಎಸ್.ಆರ್.ಎಸ್. ಕಾವೂರು ವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ದೇರೆಬೈಲ್, ಮುಲ್ಲಕಾಡು ಹಾಗೂ ಮಾಲೆಮಾರ್ ಮಾರ್ಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಲ್ಲಕಾಡು ಸೀವೇಜ್ ಪ್ಲಾಂಟ್, ಬಂಗ್ರಕೂಳೂರು, ಪ್ರೇಮಾ ಲೇಔಟ್, ಕಾವೂರು ಜಂಕ್ಷನ್‌, ಶಿವನಗರ, ಮುಲ್ಲಕಾಡು, ಆಕಾಶಭವನ, ಪರಪಾದೆ, ದೇರೆಬೈಲ್, ಕೊಂಚಾಡಿ, ಪ್ರಶಾಂತ್ ನಗರ, ಲೋಹಿತ್ ನಗರ, ಮಾಲೆಮಾರ್, ಕುಂಟಿಕಾನ, ಎ.ಜೆ. ಆಸ್ಪತ್ರೆ, ಮಂದಾರಬೈಲು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಉಳ್ಳಾಲ–ತೊಕ್ಕೊಟ್ಟು ಭಾಗದಲ್ಲೂ ವಿದ್ಯುತ್ ಕಡಿತ 33/11 ಕೆವಿ ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ ತೊಕ್ಕೊಟ್ಟು, ಉಳ್ಳಾಲ, ಕುಂಪಲ, ಕುತ್ತಾರ್, ಸೋಮೇಶ್ವರ, ಅಬ್ಬಕ್ಕ, ಮಂಚಿಲ ಹಾಗೂ ಮೇಲಂಗಡಿ 11 ಕೆವಿ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ.

ಇದರ ಪರಿಣಾಮ ಕೆರೆಬೈಲು, ತೊಕ್ಕೊಟ್ಟು ಜಂಕ್ಷನ್‌, ಮಾಸ್ತಿಕಟ್ಟೆ, ಅಬ್ಬಕ್ಕ ಸರ್ಕಲ್‌, ಉಳ್ಳಾಲ, ಸುಂದರಿಭಾಗ್‌, ಮುಕ್ಕಚೇರಿ, ಬಬ್ಬುಕಟ್ಟೆ, ಹಿರಾನಗರ, ತೊಕ್ಕೊಟ್ಟು ಒಳಪೇಟೆ, ಕೃಷ್ಣನಗರ, ಹಳೆಕೋಟೆ, ಮಂಚಿಲ, ಅಲೇಕಳ, ಮೇಲಂಗಡಿ, ಕೋಟೆಪುರ, ಕುಂಪಲ, ಪಿಲಾರ್, ಸೋಮೇಶ್ವರ, ಸುಲ್ತಾನ್ ನಗರ, ಕೆ.ಎಚ್‌.ಬಿ. ಕಾಲನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ನಿರ್ವಹಣಾ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular