ಮಂಗಳೂರು : ಜಲ್ಲಿ ಗುಡ್ಡೆ ಎಕ್ಸ್ಪೋ ಕ್ಲಬ್ (ರಿ) ವತಿಯಿಂದ “ಎಕ್ಸ್ಪೋ ಆಟಿದ ಕೂಟ-2026” ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳು ಸಾಂಪ್ರದಾಯಿಕ ಚೆನ್ನೆಮಣೆ ಆಟ ಆಡುವುದರ ಮೂಲಕ ಚಾಲನೆ ನೀಡಿದರು.

ಸದಸ್ಯರ ಮನೆಗಳಲ್ಲೇ ಸಿದ್ಧಪಡಿಸಿದ 40ಕ್ಕೂ ಅಧಿಕ ಸಾಂಪ್ರದಾಯಿಕ ಖಾದ್ಯಗಳನ್ನು ಪ್ರದರ್ಶಿಸಿ, ಎಲ್ಲರಿಗೂ ಸವಿಯುವ ಅವಕಾಶ ಕಲ್ಪಿಸಲಾಗಿದ್ದು, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ, ಲಯನ್ ಪ್ರಕಾಶ್ ಪೈ, ಅಂಬಾ ಭವಾನಿ ಮಂದಿರದ ಅಧ್ಯಕ್ಷ ಬಾಲಚಂದ್ರ ರಾವ್ ಸಿಂಧ್ಯ, ಯಶವಂತ ಶೆಟ್ಟಿ ಪಡುಬೀಡು, ಪ್ರಸಾದ್ ಶೆಟ್ಟಿ ಸೋನಾಲಿಕೆ, ಕ್ಲಬ್ ಅಧ್ಯಕ್ಷ ಜ್ಯೋತಿಷ್ ಕುಮಾರ್ ಹಾಗೂ ಗೌರವಾಧ್ಯಕ್ಷ ಇಝ್ಜಾ ಬಜಾಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಲೋಕೇಶ್ ಪಿ. ಬಹುಮಾನ್ ಸ್ವಾಗತಿಸಿದರು. ಸುಧಾಕರ್ ಪಾಟೀಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕ್ಲಬ್‌ನ ಉಪಾಧ್ಯಕ್ಷ ಪ್ರೀತೇಶ್ ವಂದನಾರ್ಪಣೆ ಸಲ್ಲಿಸಿದರು.



