Friday, July 24, 2026
Homeಕ್ರೈಂಬೆಂಗಳೂರು : ವಾಟ್ಸ್ up ನಲ್ಲಿ ಮದುವೆ ಆಹ್ವಾನ' ಹೆಸರಿನಲ್ಲಿ ಭಾರೀ ಸೈಬರ್ ವಂಚನೆ,ಸರ್ಕಾರಿ ಅಧಿಕಾರಿಯಿಂದ...

ಬೆಂಗಳೂರು : ವಾಟ್ಸ್ up ನಲ್ಲಿ ಮದುವೆ ಆಹ್ವಾನ’ ಹೆಸರಿನಲ್ಲಿ ಭಾರೀ ಸೈಬರ್ ವಂಚನೆ,ಸರ್ಕಾರಿ ಅಧಿಕಾರಿಯಿಂದ ₹9.96 ಲಕ್ಷ ದೋಚಿದ ಖದೀಮರು.

ಬೆಂಗಳೂರು : ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಬಂದ ಮದುವೆ ಆಹ್ವಾನ ಪತ್ರಿಕೆಯ ಹೆಸರಿನ ಫೈಲ್‌ನ್ನು ಓಪನ್ ಮಾಡಿದ ಪರಿಣಾಮ ಅರಣ್ಯ ಇಲಾಖೆ ಉದ್ಯೋಗಿಯೊಬ್ಬರು ಸುಮಾರು ₹9.96 ಲಕ್ಷ ಕಳೆದುಕೊಂಡಿರುವ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ, ಅರಣ್ಯ ಇಲಾಖೆ ಉದ್ಯೋಗಿ ರಮೇಶ್ ಬಾಬು ಅವರಿಗೆ ಜುಲೈ 14ರಂದು ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ಸಂದೇಶ ಬಂದಿತ್ತು. ಪರಿಚಿತರ ಮದುವೆ ಆಹ್ವಾನವೆಂದು ನಂಬಿದ ಅವರು ಸಂದೇಶದಲ್ಲಿದ್ದ ಫೈಲ್‌ನ್ನು ಡೌನ್‌ಲೋಡ್ ಮಾಡಿ ಓಪನ್ ಮಾಡಿದ್ದಾರೆ.
ಆದರೆ ಅದು APK (ಆಂಡ್ರಾಯ್ಡ್ ಅಪ್ಲಿಕೇಶನ್) ಫೈಲ್ ಆಗಿದ್ದು, ಅದನ್ನು ಓಪನ್ ಮಾಡಿದ ಸುಮಾರು 15 ನಿಮಿಷಗಳಲ್ಲೇ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹9.96 ಲಕ್ಷ ಹಣ ಕಡಿತಗೊಂಡಿರುವ ಸಂದೇಶಗಳು ಬಂದಿವೆ.

ಈ ಮೂಲಕ ಸೈಬರ್ ವಂಚಕರು ಹೊಸ ತಂತ್ರ ಬಳಸಿ ಹಣ ದೋಚಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಬರುವ ಲಿಂಕ್‌ಗಳು, APK ಫೈಲ್‌ಗಳು ಅಥವಾ ಯಾವುದೇ ಅನುಮಾನಾಸ್ಪದ ಅಟ್ಯಾಚ್‌ಮೆಂಟ್‌ಗಳನ್ನು ಕ್ಲಿಕ್ ಅಥವಾ ಡೌನ್‌ಲೋಡ್ ಮಾಡಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular