Saturday, July 18, 2026
Homeರಾಜ್ಯರಾಯಚೂರು : ರಾಸಾಯನಿಕ ಮಿಶ್ರಿತ ಕಳಬೆರಕೆ ಸೇಂದಿ ಮಾರಾಟ ಬಯಲು, ಓರ್ವನ ಬಂಧನ.!

ರಾಯಚೂರು : ರಾಸಾಯನಿಕ ಮಿಶ್ರಿತ ಕಳಬೆರಕೆ ಸೇಂದಿ ಮಾರಾಟ ಬಯಲು, ಓರ್ವನ ಬಂಧನ.!

ರಾಯಚೂರು : ರಾಸಾಯನಿಕ ಮಿಶ್ರಿತ ಕಳಬೆರಕೆ ಸೇಂದಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ರಾಯಚೂರು ಗ್ರಾಮೀಣ ಪೊಲೀಸರು ಭೇದಿಸಿದ್ದಾರೆ.

ಸ್ನೇಹಾರೆಡ್ಡಿ ಡಾಬಾ ಹಿಂಭಾಗದಲ್ಲಿ ನಡೆದ ದಾಳಿಯಲ್ಲಿ ಸುಮಾರು 40 ಲೀಟರ್ ರಾಸಾಯನಿಕ ಮಿಶ್ರಿತ ಕಳಬೆರಕೆ ಸೇಂದಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಪರಶುರಾಮ್ (25) ಎಂಬಾತನನ್ನು ಬಂಧಿಸಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 275, 286 ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ (K.E. Act) ಅಡಿಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular