ಮಂಗಳೂರು : ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಎನ್ಡಿಪಿಎಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 76/2021ರ ಕಲಂ 8(ಸಿ) ಹಾಗೂ 21(ಬಿ) NDPS ಕಾಯ್ದೆಯ ಪ್ರಕರಣದ ಆರೋಪಿ ಫಜಲ್ (31), ತಂದೆ ಮೊಹಮ್ಮದ್ ಅಲಿ, ಕಾಸರಗೋಡು ಜಿಲ್ಲೆಯ ಉಪ್ಪಳದ ಪಚ್ಚಿಲಾಂಬರ್ ನಿವಾಸಿಯಾಗಿದ್ದಾನೆ.
ಆರೋಪಿ 2021ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದರು.
ಜೂನ್ 9, 2026ರಂದು ಉಪ್ಪಳದಲ್ಲಿರುವ ಆರೋಪಿಯ ಮನೆಯಿಂದ ಆತನನ್ನು ಬಂಧಿಸಿದ ಪೊಲೀಸರು, ಮಾನ್ಯ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ, ಮಂಗಳೂರು (ಸ್ಪೆಷಲ್ ಕೇಸ್ ನಂ. 23/2026)ಕ್ಕೆ ಹಾಜರುಪಡಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

