Saturday, August 1, 2026
Homeಜಿಲ್ಲೆಮಂಗಳೂರು ; ಪುತ್ತೂರು ಪಡೀಲ್ ಸಮೀಪ ಭೀಕರ ರಸ್ತೆ ಅಪಘಾತ,ಯುವಕ ಸ್ಥಳದಲ್ಲೇ ಸಾವು.

ಮಂಗಳೂರು ; ಪುತ್ತೂರು ಪಡೀಲ್ ಸಮೀಪ ಭೀಕರ ರಸ್ತೆ ಅಪಘಾತ,ಯುವಕ ಸ್ಥಳದಲ್ಲೇ ಸಾವು.

ಪುತ್ತೂರು ; ಪುತ್ತೂರು ಪಡೀಲ್ ಸಮೀಪ ಭೀಕರ ರಸ್ತೆ ಅಪಘಾತ ಸಂಬಂಧಿಸಿದ್ದು ಯುವಕ ಸ್ಥಳದಲ್ಲೇ ಸಾವನಪ್ಪಿದ ಘಟನೆ ನಡೆದಿದೆ.

ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ನಿವಾಸಿ ಧನರಾಜ್ (23) ಮೃತ ಯುವಕ

ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಈತ ಜಾತ್ರೆಗೆ ಊರಿಗೆ ಬಂದಿದ್ದ ವೇಳೆ ದುರ್ಘಟನೆ ನಡೆದಿದೆ. ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಹಾಗೂ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಬಳಿಕ ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇನ್ನಿಬ್ಬರು ಸವಾರರಿಗೆ ಗಂಭೀರ ಗಾಯ , ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular